Select Your Language

Notifications

webdunia
webdunia
webdunia
webdunia

ಪಳನಿ ದೇವಸ್ಥಾನ ಪ್ರಸಾದದಲ್ಲಿ ಪುರುಷರಿಗೆ ಕುತ್ತು ತರುವ ಅಂಶ ಬಳಕೆ: ನಿರ್ದೇಶಕ ಮೋಹನ್ ಅರೆಸ್ಟ್

Palani murugan

Krishnaveni K

ಚೆನ್ನೈ , ಮಂಗಳವಾರ, 24 ಸೆಪ್ಟಂಬರ್ 2024 (16:38 IST)
ಚೆನ್ನೈ: ಇತ್ತೀಚೆಗೆ ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗುತ್ತಿದ್ದ ಸುದ್ದಿ ಬಹಿರಂಗವಾಗಿದ್ದು ಇಡೀ ಹಿಂದೂ ಸಮುದಾಯವನ್ನೇ ತಲ್ಲಣಗೊಳಿಸಿದೆ. ಆದರೆ ಈಗ ಪಳನಿ ದೇವಸ್ಥಾನದ ಪ್ರಸಾದದಲ್ಲೂ ಕಲಬೆರಕೆ ಆರೋಪ ಮಾಡಲಾಗಿದ್ದು, ಆರೋಪ ಮಾಡಿದ ತಮಿಳು ನಿರ್ದೇಶಕ ಮೋಹನ್ ಎಂಬವರನ್ನು ಅರೆಸ್ಟ್ ಮಾಡಲಾಗಿದೆ.

ತಮಿಳುನಾಡಿನಲ್ಲಿರುವ ಪ್ರಸಿದ್ಧ ಪಳನಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದದಲ್ಲಿ ಪುರುಷತ್ವ ದುರ್ಬಲಗೊಳಿಸುವ ಅಂಶಗಳನ್ನು ಮಿಕ್ಸ್ ಮಾಡಲಾಗುತ್ತಿದೆ ಎಂದು ಮೋಹನ್ ಆರೋಪ ಮಾಡಿದ್ದರು. ಯೂ ಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಗಂಭೀರ ಆರೋಪ ಮಾಡಿದ್ದರು.
 
ಅದರ ಬೆನ್ನಲ್ಲೇ ಮೋಹನ್ ಜಿ ಅವರನ್ನು ಬಂಧಿಸಲಾಗಿದೆ. ತಿರುಪತಿ ಲಡ್ಡಿನ ಬಗ್ಗೆ ಪ್ರತಿಕ್ರಿಯಿಸುತ್ತಾ ಮೋಹನ್ ಜಿ, ಪಳನಿ ದೇವಸ್ಥಾನದಲ್ಲಿ ನೀಡಲಾಗುವ ಪಂಚಾಮೃತದಲ್ಲೂ ಪುರುಷತ್ವ ದುರ್ಬಲಗೊಳಿಸುವ ಅಂಶ ಮಿಕ್ಸ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

ತಿರುಚ್ಚಿಯ ಅಪರಾಧ ದಳ  ವಿಭಾಗದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಪಳನಿ ದೇವಸ್ಥಾನದ ಪ್ರಸಾದಲ್ಲಿ ಪುರುಷತ್ವ ದುರ್ಬಲಗೊಳಿಸುವ ಅಂಶ ಬೆರೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಅದನ್ನು ಮರೆ ಮಾಚಲಾಯಿತು. ಇದನ್ನು ಪ್ರೂವ್ ಮಾಡಲು ನಮ್ಮಲ್ಲಿ ಸಾಕ್ಷ್ಯಗಳಿಲ್ಲ ಎಂದು ಮೋಹನ್ ಜಿ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ಲಡ್ಡಿನ ಕುಹುಕ ಮಾಡಿದ್ದ ನಟ ಕಾರ್ತಿ: ಪವನ್ ಕಲ್ಯಾಣ್ ಆಕ್ರೋಶಕ್ಕೆ ಕಂಗಾಲು