Select Your Language

Notifications

webdunia
webdunia
webdunia
webdunia

ಗಂಧದ ಗುಡಿ ಟೀಸರ್ ನಲ್ಲಿ ‘ಪವರ್ ಸ್ಟಾರ್’ ಬಿರುದು ತೆಗೆಯಲು ಹೇಳಿದ್ದ ಪುನೀತ್

ಗಂಧದ ಗುಡಿ ಟೀಸರ್ ನಲ್ಲಿ ‘ಪವರ್ ಸ್ಟಾರ್’ ಬಿರುದು ತೆಗೆಯಲು ಹೇಳಿದ್ದ ಪುನೀತ್
ಬೆಂಗಳೂರು , ಬುಧವಾರ, 8 ಡಿಸೆಂಬರ್ 2021 (09:05 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಟೀಸರ್ ಲಾಂಚ್ ಆಗಿದೆ. ಈ ಟೀಸರ್ ಬಗ್ಗೆ ಅಮೋಘ ವರ್ಷ ಮಾತನಾಡುವಾಗ ಕುತೂಹಲಕಾರಿ ವಿಚಾರವೊಂದನ್ನು ಹೇಳಿದ್ದಾರೆ.

ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಪುನೀತ್ ರಾಜ್ ಕುಮಾರ್-ಅಮೋಘವರ್ಷ ಜೊತೆಯಾಗಿ ಮಾಡಿದ್ದರು. ಇದರ ಟೀಸರ್ ತಯಾರಿಸಿ ಪುನೀತ್ ರಾಜ್ ಕುಮಾರ್ ಗೆ ತೋರಿಸಿದಾಗ ಪುನೀತ್ ಅದರಲ್ಲಿ ಒಂದು ಸಣ್ಣ ಆಕ್ಷೇಪ ಹೇಳಿದ್ದರಂತೆ.

ಟೀಸರ್ ನಲ್ಲಿ ಪುನೀತ್ ಹೆಸರಿನ ಮೊದಲು ‘ಪವರ್ ಸ್ಟಾರ್’ ಎಂದು ಹಾಕಲಾಗಿತ್ತು. ಇದನ್ನು ನೋಡಿ ‘ಪವರ್ ಸ್ಟಾರ್’ ಕೈ ಬಿಟ್ಟು ಕೇವಲ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲು ಅಪ್ಪು ಸೂಚಿಸಿದ್ದರಂತೆ. ಹೀಗಾಗಿ ಟೀಸರ್ ನಲ್ಲೂ ಕೇವಲ ಪುನೀತ್ ರಾಜ್ ಕುಮಾರ್ ಎಂದೇ ಉಲ್ಲೇಖಿಸಲಾಗಿದೆ. ಇದು ಅವರ ವಿನಯತೆಗೆ ಸಾಕ್ಷಿ ಎಂದು ಅಮೋಘವರ್ಷ ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಇಲ್ಲದೇ ಜೇಮ್ಸ್ ಶೂಟಿಂಗ್ ಮತ್ತೆ ಶುರು