ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಮುಂದಿನ ಸಿನಿಮಾ ‘ಜೇಮ್ಸ್’. ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿರುವ ಡೇಟ್ ಇದೀಗ ಫಿಕ್ಸ್ ಆಗಿದೆ.
									
										
								
																	
ಯುವರತ್ನ ಸಿನಿಮಾ ಬಿಡುಗಡೆ ಹಂತದಲ್ಲಿದ್ದು, ಇದಾದ ಬಳಿಕ ಪುನೀತ್ ಜೇಮ್ಸ್ ನಲ್ಲಿ ಅಭಿನಯಿಸಲಿದ್ದಾರೆ. ಈ ಸಿನಿಮಾಗೆ ಜನವರಿ 19 ರಂದು ಮುಹೂರ್ತ ಕಾರ್ಯಕ್ರಮವಿದ್ದು, ಅದಾದ ಮರುದಿನದಿಂದಲೇ ಶೂಟಿಂಗ್ ಆರಂಭವಾಗಲಿದೆ.
									
			
			 
 			
 
 			
			                     
							
							
			        							
								
																	‘ಬಹದ್ದೂರ್’ ಸಿನಿಮಾ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ ಸಿನಿಮಾ ಇದಾಗಿದ್ದು, ಪಕ್ಕಾ ಕಮರ್ಷಿಯಲ್ ಸಿನಿಮಾವಾಗಲಿದೆ. ಹೆಸರಿಗೆ ತಕ್ಕ ಹಾಗೆ ಪುನೀತ್ ಮೈನವಿರೇಳಿಸುವ ಸ್ಟಂಟ್ಸ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.