ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಪರಭಾಷೆಗಳಲ್ಲೂ ಬಿಡುಗಡೆಯಾಗುವ ಸಾಧ್ಯತೆಯಿದೆ.
									
			
			 
 			
 
 			
			                     
							
							
			        							
								
																	 
									
										
								
																	
ಈ ಬಗ್ಗೆ ಚಿತ್ರತಂಡ ಸುಳಿವು ನೀಡಿದೆ. ಈಗಾಗಲೇ ಚಿತ್ರೀಕರಣ ಪೂರೈಸಿ ಬಿಡುಗಡೆಯ ಸಿದ್ಧತೆಯಲ್ಲಿರುವ ಚಿತ್ರತಂಡ ಮೊದಲು ಕನ್ನಡದಲ್ಲಿ ಬಿಡುಗಡೆ ದಿನಾಂಕ ಫೈನಲ್ ಮಾಡಲಿದೆ. ಬಳಿಕ ಪ್ರಚಾರ ಕೆಲಸ ಮಾಡಲಿದೆ. ಬಳಿಕ ಬೇರೆ ಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಚಿತ್ರತಂಡದ ಮೂಲಗಳು ಹೇಳುತ್ತಿವೆ. ಹೀಗಾಗಿ ಪುನೀತ್ ಅಭಿನಯದ ಸಿನಿಮಾವೊಂದು ಪರಭಾಷೆಗೂ ರೀಚ್ ಆಗುವ ಸಾಧ‍್ಯತೆ ತಳ್ಳಿ ಹಾಕುವಂತಿಲ್ಲ.