Publish Date: Mon, 22 Nov 2021 (09:25 IST)
Updated Date: Mon, 22 Nov 2021 (09:27 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ಬಳಿಕ ಅವರ ಕನಸಿನ ಪಿಆರ್ ಕೆ ಪ್ರೊಡಕ್ಷನ್ ಮುಂದಿನ ಹಾದಿ ಬಗ್ಗೆ ಟ್ವೀಟ್ ಮೂಲಕ ತಿಳಿಸಿತ್ತು. ಇದರ ಬೆನ್ನಲ್ಲೇ ಅಭಿಮಾನಿಗಳು ಪಿಆರ್ ಕೆ ಪ್ರೊಡಕ್ಷನ್ ಬೆಂಬಲಕ್ಕೆ ನಿಂತಿದ್ದಾರೆ.
ಪಿಆರ್ ಕೆ ಪ್ರೊಡಕ್ಷನ್ ಮುಂದೆಯೂ ಕಾರ್ಯನಿರ್ವಹಿಸಲಿದೆ. ಪುನೀತ್ ಕನಸು ನನಸು ಮಾಡಲಿದೆ ಎಂದು ಪ್ರಕಟಣೆ ತಿಳಿಸಿತ್ತು. ಇದರ ಬೆನ್ನಲ್ಲೇ ಪುನೀತ್ ಫ್ಯಾನ್ಸ್ ಪಿಆರ್ ಕೆ ಪ್ರೊಡಕ್ಷನ್ ಗೆ ಬೆಂಬಲ ಸೂಚಿಸಿದ್ದಾರೆ.
ನಿಮ್ಮ ಜೊತೆ ನಾವಿದ್ದೇವೆ. ಪವರ್ ಸ್ಟಾರ್ ಪುನೀತ್ ರ ಕನಸು ನನಸು ಮಾಡಲು ನಮ್ಮ ಬೆಂಬಲ ನಿಮಗಿರಲಿದೆ ಎಂದಿದ್ದಾರೆ. ಹೀಗಾಗಿ ಪಿಆರ್ ಕೆ ಪ್ರೊಡಕ್ಷನ್ ವತಿಯಿಂದ ಹೊಸಬರ ಸಿನಿಮಾಗಳು ಸೆಟ್ಟೇರುವುದು ಖಂಡಿತಾ ಎನ್ನಲಾಗಿದೆ.