Select Your Language

Notifications

webdunia
webdunia
webdunia
webdunia

ಸಿನಿಮಾದಲ್ಲಿ ಅವಕಾಶ ಸಿಗಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಾರಂತೆ..?

ಸಿನಿಮಾದಲ್ಲಿ ಅವಕಾಶ ಸಿಗಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಾರಂತೆ..?
ಹೈದ್ರಾಬಾದ್ , ಮಂಗಳವಾರ, 23 ಮೇ 2017 (20:37 IST)
ಲಕ್ಷ್ಮೀ ರೈ.. ಕರ್ನಾಟಕದ ಮೂಲದವರಾದರೂ ವೃತ್ತಿ ಬದುಕು ಕಟ್ಟಿಕೊಂಡಿದ್ದೆಲ್ಲ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ.. ಸಿನಿಮಾದಲ್ಲಿ ಬೋಲ್ಡ್ ಸೀನ್`ಗಳ ಮೂಲಕ ಗಮನ ಸೆಳೆಯುವ ಲಕ್ಷ್ಮೀ ರೈ, ತನ್ನ ಮನಸ್ಸಿನಿಂದ ಬರುವ ಮಾತುಗಳನ್ನೂ ಸಹ ಅಷ್ಟೇ ಬೋಲ್ಡ್ ಆಗಿ ಹೊರಹಾಕಿಬಿಡುತ್ತಾರೆ.
 

ಇದೀಗ, ಚಿತ್ರರಂಗದಲ್ಲಿ ಇದೇ ಎನ್ನಲಾದ ಪಾತ್ರಕ್ಕಾಗಿ ಸೆಕ್ಸ್ ಸಂಪ್ರದಾಯಸ ಬಗ್ಗೆ ಬೋಲ್ಡ್ ಹೇಳಿಕೆ ನೀಡಿದ್ದು ಚಿತ್ರರಂಗವನ್ನ ಬೆಚ್ಚಿಬೀಳಿಸಿದೆ. ಪತ್ರಕರ್ತರ ಜೊತೆಗಿನ ಸಂವಾದದ ವೇಳೆ ಲಕ್ಷ್ಮೀ ರೈ, ಚಿತ್ರರಂಗದಲ್ಲಿ ನಿರ್ಮಾಪಕರು, ನಿರ್ದೇಶಕರು ಅವಕಾಶ ನೀಡಬೇಕೆಂದರೆ ನಟಿಯರನ್ನ ತಮ್ಮ ಜೊತೆ ಮಲಗುವಂತೆ ಕೇಳುತ್ತಾರೆ. ಮಲಗಿದರೆ ಆಫರ್ ಪಕ್ಕಾ ಆಗುತ್ತೆ. ಚಿತ್ರಕ್ಕೆ ನಟಿಯರ ಆಯ್ಕೆ ಪ್ರಕ್ರಿಯೆ ವೇಳೆ ತಮ್ಮ ವೈಯಕ್ತಿಕ ಇಚ್ಛೆಗೆ ಸಹಕರಿಸಬೇಕೆಂದು ನೇರವಾಗಿ ಪ್ರಸ್ತಾಪಿಸುತ್ತಾರೆ ಎಂದು ಲಕ್ಷ್ಮೀ ರೈ ಹೇಳಿದ್ದಾರೆ.

ನಟಿ ಲಕ್ಷ್ಮೀರೈ ನೀಡಿರುವ ಈ ಆಘಾತಕಾರಿ ಹೇಳಿಕೆ ಕಾಲಿವುಡ್, ಟಾಲಿವುಡ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ ವಿರುದ್ಧ ಫೇಸ್ಬುಕ್`ನಲ್ಲಿ ಕಿಡಿಕಾರಿದ ಶಿಲ್ಪಾ ಗಣೇಶ್