Publish Date: Tue, 23 May 2017 (18:40 IST)
Updated Date: Tue, 23 May 2017 (21:04 IST)
ಬಿಜೆಪಿ ಸರ್ಕಾರ ಬಂದ ಬಳಿಕ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.22ರಷ್ಟು ಹೆಚ್ಚಿವೆ ಎಂದು ಟೀಕಿಸಿದ್ದ ಮಾಜಿ ಸಂಸದೆ, ನಟಿ ರಮ್ಯಾ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಗಣೇಶ್ ಹರಿಹಾಯ್ದಿದ್ದಾರೆ.
ಮೇಡಮ್ ರಮ್ಯಾ.. ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಬಹಳಷ್ಟು ಸೇವೆ ಮಾಡುತ್ತಿದ್ದೀರಿ ಅದನ್ನ ಮುಂದುವರಿಸಿ. ಆದರೆ, ದಯವಿಟ್ಟು ರಾಹುಲ್ ಗಾಂಧಿ ರೀತಿ ಮಾತನಾಡಬೇಡಿ. ನಿರ್ಭಯಾ ರೇಪ್ ಪ್ರಕರಣದಲ್ಲಿ ಸೂಕ್ತ ಕ್ರಮ ಜರುಗಿಸದಿದ್ದಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಮೇಡಂ ಸಾರ್ವಜನಿಕವಾಗಿ ರಾಜರಾಜೇಶ್ವರಿ ಶಾಸಕ ಮುನಿರತ್ನ ಬೆಂಬಲಿಗರು ಜೆಡಿಎಸ್ ಕಾರ್ಪೊರೇಟರ್ ಅವರ ಸೀರೆ ಎಳೆಯುವಾಗ ಎಲ್ಲಿದ್ರಿ..? ಕರ್ನಾಟಕ ಮುಖ್ಯಮಂತ್ರಿ ಉಪಸ್ಥಿತಿ ಇದ್ದ ಸ್ಥಳದಲ್ಲೇ ಈ ಘಟನೆ ನಡೆದಿದ್ದು ನಿಮಗೆ ಗೊತ್ತಾ..? ಎಂದು ಟೀಕಿಸಿದ್ದಾರೆ.
ಇಷ್ಟೇ ಅಲ್ಲ, ಮೇಟಿ ಸೆಕ್ಸ್ ಸ್ಕ್ಯಾಂಡಲ್, ಸುನಂದಾ ಪುಷ್ಕರ್ ಪ್ರಕರಣವನ್ನ ಎಳೆದು ವಾಗ್ದಾಳಿ ನಡೆಸಿದ್ದಾರೆ. ನೀವು ಒಳ್ಳೆಯ ಇಂಗ್ಲೀಷ್ ಮಾತ್ನಾಡುತ್ತೀರಿ. ಆದರೆ, ನಿಮ್ಮ ನಕಲಿ ಅಮೆರಿಕನ್ ಆಕ್ಸೆಂಟ್ ಕರ್ನಾಟಕದ ಜನರಿಗೆ ಅರ್ಥವಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ