Publish Date: Tue, 25 Oct 2016 (10:53 IST)
Updated Date: Tue, 25 Oct 2016 (10:58 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಆಗಾಗ ವಿಶಿಷ್ಟ ಚಿತ್ರಗಳನ್ನು ಮಾಡುತ್ತಿರುತ್ತಾರೆ. ಅಂತಹ ಒಂದು ಚಿತ್ರ “ಮಮ್ಮಿ”
ಈ ಚಿತ್ರ ನವಂಬರ್ ನಲ್ಲಿ ಬಿಡುಗಡೆಯಾಗಲಿದೆ. ಹೆಸರಿಗೆ ತಕ್ಕ ಹಾಗೆ ಇದು ಅಮ್ಮ-ಮಗಳ ನಡುವೆ ನಡೆಯುವ ಕತೆಯೇನೋ ಹೌದು. ಆದರೆ ಆರಾಮವಾಗಿ ಕೂತು ನೋಡುವಂತಹ ಸೆಂಟಿಮೆಂಟ್ ಕತೆಯಿರುವ ಸಿನಿಮಾ ಅಲ್ಲ. ಹಾರರ್ ಸಿನಿಮಾ. ಎದೆ ಗಟ್ಟಿ ಇದ್ದವರು ಮಾತ್ರ ನೋಡಬಹುದು.
ಆದರೆ ಇದು ನಿಜ ಜೀವನದಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆದ ಸಿನಿಮಾ. ರಮೇಶ್ ಅರವಿಂದ್ ಅವರ ಪುಷ್ಪಕ ವಿಮಾನದಲ್ಲಿ ನಟಿಸಿದ ಯುವಿನಾ ಪುಟ್ಟ ಮಗಳ ಪಾತ್ರವನ್ನು ಮಾಡುತ್ತಿದ್ದಾರೆ. ರವಿಕುಮಾರ್ ಇದರ ನಿರ್ಮಾಪಕರು. ಲೋಹಿತ್ ನಿರ್ದೇಶಕರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ