Publish Date: Tue, 25 Oct 2016 (10:21 IST)
Updated Date: Tue, 25 Oct 2016 (10:38 IST)
ಬೆಂಗಳೂರು: ಬಹುತಾರಾಗಣದ ಜಾನ್ ಜಾನಿ ಜನಾರ್ಧನ್ ಚಿತ್ರ ನವಂಬರ್ 11 ಕ್ಕೆ ಬಿಡುಗಡೆಯಾಗಲಿದೆ. ಯೋಗೇಶ್, ಅಜೇಯ್ ರಾವ್ ಮತ್ತು ಕೃಷ್ಣ ನಾಯಕರಾಗಿ ನಟಿಸಿರುವ ಚಿತ್ರ ಇದಾಗಿದೆ.
ಮೂವರು ಸ್ನೇಹಿತರ ಕುರಿತು ಇರುವ ಕತೆ ಇದಾಗಿದೆ. ವಿಶೇಷ ಎಂದರೆ ಇದರಲ್ಲಿ ಮಾಲಾಶ್ರೀ , ಐಂದ್ರಿತಾ ರೇ ಹಾಗೂ ಬಾಲಿವುಡ್ ಬೆಡಗಿ ಕಂಗನಾ ರನಾವತ್ ಕೂಡಾ ನಟಿಸಿದ್ದಾರೆ. ಮೂವರು ನಾಯಕರಿರುವ ಕಾರಣ ಹೊಡೆದಾಟದ ದೃಶ್ಯಗಳಿಗೆ, ಮನರಂಜನೆಗೆ ಕೊರತೆಯಿರಲಿಕ್ಕಿಲ್ಲ.
ಅರ್ಜುನ್ ಜನ್ಯಾ ಸಂಗೀತವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಗುರು ದೇಶಪಾಂಡೆ ನಿರ್ದೇಶಕರು. ಎಲ್. ಪದ್ಮನಾಭ, ಜಿ.ಎನ್. ಶಶಿ ಕಿರಣ್ ಮತ್ತು ಕೆ. ಗಿರೀಶ್ ನಿರ್ಮಾಪಕರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ