Publish Date: Sun, 05 Mar 2017 (11:41 IST)
Updated Date: Sun, 05 Mar 2017 (11:43 IST)
ದೇಶಿಗರ್ಲ್ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ನಲ್ಲಿ ಪಾದ ಊರಿರುವುದು ಗೊತ್ತೇ ಇದೆ. ತನ್ನ ಚೊಚ್ಚಲ ಹಾಲಿವುಡ್ ಚಿತ್ರ ’ಬೇವಾಚ್’ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ ಪಿಗ್ಗಿ. ಈ ಗ್ಯಾಪಲ್ಲಿ ಟೈಮ್ ವೇಸ್ಟ್ ಮಾಡದೆ ಸಾಮಾಜಿಕ ಮಾಧ್ಯಮದಲ್ಲಿ ಬಿಜಿಯಾಗಿದ್ದಾರೆ.
ಸಿನಿಮಾ ಶೂಟಿಂಗ್ನಿಂದ ಸ್ವಲ್ಪ ರಿಲೀಫ್ ಆಗಿರುವ ಪ್ರಿಯಾಂಕಾ ಚೋಪ್ರಾ ಸಮುದ್ರ ತೀರದಲ್ಲಿ ಮೈಚಾಚಿ ರಿಲ್ಯಾಕ್ಸ್ ಆಗಿದ್ದಾರೆ. ಬಿಕಿನಿ ತೊಟ್ಟಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಪೋಸ್ಟ್ ಮಾಡಿದ್ದೇ ತಡ ಅವು ವೈರಲ್ ಆಗಿವೆ. ದೋಸ್ತಾನಾ, ಡಾನ್, ದಿಲ್ ದಡಕನ್ ಚಿತ್ರಗಳಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ..’ಕ್ವಾಂಟಿಕೋ’ ಸೀರೀಸ್ನಲ್ಲಿ ಇನ್ನಷ್ಟು ಮಿಂಚಿದ್ದಾರೆ. ಬೇವಾಚ್ ಚಿತ್ರದ ಟ್ರೇಲರ್ನಲ್ಲಿ ಆಕೆ ಮತ್ತಷ್ಟು ರೋಚಕವಾಗಿ ಅಭಿನಯಿಸಿರುವುದು ಗೊತ್ತೇ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.