Select Your Language

Notifications

webdunia
webdunia
webdunia
webdunia

ಅಕ್ಷಯ್ ಕುಮಾರ್ ಹೆಂಡತಿಯಾಗಿ ರಾಧಿಕಾ ಆಪ್ಟೆ

ಅಕ್ಷಯ್ ಕುಮಾರ್ ಹೆಂಡತಿಯಾಗಿ ರಾಧಿಕಾ ಆಪ್ಟೆ
Mumbai , ಭಾನುವಾರ, 5 ಮಾರ್ಚ್ 2017 (11:36 IST)
ಸಿನಿಮಾಗಳಿಗಿಂತ ಹಾಟ್ ದೃಶ್ಯಗಳು, ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚಾಗಿ ಗುರುತಿಸಿಕೊಂಡ ಬೆಡಗಿ ರಾಧಿಕಾ ಆಪ್ಟೆ. ಈ ನಡುವೆ ಬಾಲಿವುಡ್ ಸೇರಿದಂತೆ ಚಿತ್ರರಂಗದಲ್ಲಿ ಸಾಕಷ್ಟು ಬಿಜಿಯಾಗಿರುವ ತಾರೆ. ಪ್ರತಿಭಾವಂತ ನಟಿ ಎನ್ನಿಸಿಕೊಂಡಿರುವ ಈಕೆಯನ್ನು ಇತ್ತೀಚೆಗೆ ಕೆಲವರು ತಮ್ಮ ಚಿತ್ರಕ್ಕೆ ಈ ಬೆಡಗಿಯೇ ಸೂಕ್ತ ಎಂದು ಆಯ್ಕೆ ಮಾಡುತ್ತಿದ್ದಾರೆ.
 
ಇತ್ತೀಚೆಗೆ ಆರ್ ಬಲ್ಕಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ರಾಧಿಕಾರನ್ನು ಆಯ್ಕೆ ಮಾಡಲಾಗಿದೆ. ಮಹಿಳೆಯರಿಗಾಗಿ ಕಡಿಮೆ ಬೆಲೆಗೆ ನ್ಯಾಪ್‌ಕಿನ್ ತಯಾರಿಸಿದ ಅರುಣಾಚಲಂ ಮುರುಗನಾಧಂ ಎಂಬುವವರ ಜೀವನಕಥೆಯಾಧಾರಿತ ’ಪದ್ಮನ್’ ಎಂಬ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 
 
ಈ ಚಿತ್ರದ ಹೀರೋ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್. ಚಿತ್ರದಲ್ಲಿ ರಾಧಿಕಾ ಅವರು ಅಕ್ಷಯ್‍ಗೆ ಹೆಂಡತಿಯಾಗಿ ಕಾಣಿಸಲಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ನನ್ನ ಮಗಳು ಸಿನಿಮಾಗಳಿಗೆ ಅಡಿಯಿಟ್ಟಿದ್ದರೆ ಕಾಲು ಮುರಿಯುತ್ತಿದ್ದೆ’