Select Your Language

Notifications

webdunia
webdunia
webdunia
webdunia

’ನನ್ನ ಮಗಳು ಸಿನಿಮಾಗಳಿಗೆ ಅಡಿಯಿಟ್ಟಿದ್ದರೆ ಕಾಲು ಮುರಿಯುತ್ತಿದ್ದೆ’

’ನನ್ನ ಮಗಳು ಸಿನಿಮಾಗಳಿಗೆ ಅಡಿಯಿಟ್ಟಿದ್ದರೆ ಕಾಲು ಮುರಿಯುತ್ತಿದ್ದೆ’
Mumbai , ಭಾನುವಾರ, 5 ಮಾರ್ಚ್ 2017 (11:33 IST)
ಸಿನಿಮಾ ನಟರ ಮಕ್ಕಳು ಚಿತ್ರರಂಗಕ್ಕೆ ಅಡಿಯಿಡುವುದು ಮಾಮೂಲಿ. ತಮ್ಮ ಅಭಿಮಾನ ನಟರ ಮಕ್ಕಳು ಯಾವಾಗ ಚಿತ್ರರಂಗಕ್ಕೆ ಬರುತ್ತಾರೆ ಎಂದು ಅಭಿಮಾನಿಗಳು ಹಾತೊರೆಯುತ್ತಿರುತ್ತಾರೆ. ಸಿನಿಮಾ ಮಂದಿಯೂ ಆಸಕ್ತಿಯಿಂದ ಎದುರು ನೋಡುತ್ತಿರುತ್ತಾರೆ.
 
ಮಾಧ್ಯಮಗಳು ಸಿನಿಮಾ ತಾರೆಗಳನ್ನು ಆಗಾಗ ಕೇಳುವ ಪ್ರಶ್ನೆ ನಿಮ್ಮ ಮಕ್ಕಳನ್ನು ಯಾವಾಗ ಪರಿಚಯಿಸುತ್ತೀರಿ ಎಂಬುದು. ಅದೇ ರೀತಿ ಬಾಲಿವುಡ್ ನಟ ಸಂಜಯ್ ದತ್‌ರನ್ನು ತಮ್ಮ ಮಗಳು ಯಾವಾಗ ಚಿತ್ರರಂಗಕ್ಕೆ ಅಡಿಯಿಡುವುದು ಎಂದು ಕೇಳಿದ್ದಾರೆ. ಇದಕ್ಕೆ ಸಂಜು ಬಾಬಾ ಉತ್ತರ ಏನು ಗೊತ್ತಾ?
 
"ನನ್ನ ಮಗಳು ನಟಿಯಾಗುತ್ತಾಳೆ ಎಂದಿದ್ದರೆ ಕಾಲು ಮುರಿಯುತ್ತಿದ್ದೆ" ಎಂದು ಉತ್ತರಿಸಿದ್ದಾರೆ. ಸಂಜಯ್ ಸದ್ಯಕ್ಕೆ ’ಭೂಮಿ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಂದೆ ಮಗಳ ಹಿನ್ನೆಲೆಯಲ್ಲಿ ಸಾಗುವ ಚಿತ್ರ ಇದು. ಸಂಜಯ್‌ಗೆ ಮಗಳಾಗಿ ಅದಿತಿ ರಾವ್ ಹೈದರಿ ಅಭಿನಯಿಸುತ್ತಿದ್ದಾರೆ. 
 
ಈ ಸಿನಿಮಾ ಬಗ್ಗೆ ಆಗ್ರಾದಲ್ಲಿ ನಿರ್ವಹಿಸಿದ ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ಮಾತನಾಡುತ್ತಾ, ತ್ರಿಷಾಲಾಳನ್ನು ಒಳ್ಳೆಯ ಉದ್ಯೋಗದಲ್ಲಿ ನೋಡಲು ತುಂಬಾ ಕಷ್ಟಪಟ್ಟೆ. ತುಂಬಾ ಖರ್ಚು ಮಾಡಿ ಉತ್ತಮ ಕಾಲೇಜಿನಲ್ಲಿ ಸೇರಿಸಿದೆ. ಸದ್ಯಕ್ಕೆ ಆಕೆ ಎಫ್‌ಬಿಐನಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೊಂದು ಕಡೆ ಫ್ಯಾಷನ್ ಡಿಸೈನಿಂಗ್‌ನಲ್ಲಿ ತೊಡಗಿಕೊಂಡಿದ್ದಾಳೆ. ಆದರೆ ಸಿನಿಮಾದಲ್ಲಿ ನಟಿ ಆಗುವುದು ಅಷ್ಟು ಸುಲಭವಲ್ಲ. ಅಭಿನಯ ಎಂಬುದು ಮೇಲ್ನೋಟಕ್ಕೆ ಗ್ಲಾಮರ್ ಆಗಿ ಕಾಣಿಸುತ್ತದೆ ...ಆದರೆ ಅದು ತುಂಬಾ ಕಷ್ಟಕರ ಕೆಲಸ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿನೋನ್ ಸಂಭಾವನೆ ಎಷ್ಟು ಗೊತ್ತಾ?