ಹಣಕ್ಕಾಗಿ ಬಾಹುಬಲಿ-2 ಚಿತ್ರದ ಬಿಡುಗಡೆಯನ್ನ ವಿರೋಧಿಸುತ್ತಿದ್ದೀರಿ ಎಂದು ಕನ್ನಡ ಪರ ಹೋರಾಟಗಾರರಾದ ವಾಟಾಳಾ ನಾಗರಾಜ್ ಮತ್ತು ಸಾ.ರಾ. ಗೋವಿಂದು ವಿರುದ್ಧ ಉದ್ಯಮಿ ಪ್ರಶಾಂತ್ ಸಂಬರ್ಗಿ ಫೇಸ್ಬುಕ್ ಪೋಸ್ಟ್`ನಲ್ಲಿ ಗಂಭೀರ ಾರೋಪ ಮಾಡಿದ್ದಾರೆ.
ರಾಜಕುಮಾರ ಚಿತ್ರವನ್ನೂ ವಿವಾದದಲ್ಲಿ ಎಳೆದು ತಮದಿರುವ ಸಂಬರ್ಗಿ, ಯೂಟ್ಯೂಬ್ ತೆಗೆದು ನೋಡಿ ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ತಂದೆ ಪಾತ್ರದಲ್ಲಿ ನಟಿಸಿರುವ ಶರತ್ ಕುಮಾರ್ ಸಹ ಕಾವೇರಿ ಬಗ್ಗೆ ಇನ್ನೂ ಕೀಳಾಗಿ ಮಾತಾಡಿದ್ದಾರೆ. ಆದರೆ, ರಾಜಕುಮಾರ ಚಿತ್ರಕ್ಕೆ ಯಾಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಣಕ್ಕಾಗಿ ನೀವು ಸೆಲೆಕ್ಟಿವ್ ಆಗಿ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಸಂಬರ್ಗಿ ಆರೋಪಿಸಿದ್ದಾರೆ.
ಈ ಹಿಂದೆ ಸತ್ಯರಾಜ್ ಅಭಿನಯದ ಹಲವು ಚಿತ್ರಗಳು ಇಲ್ಲಿ ತೆರೆ ಕಂಡಿವೆ. ಬಾಹುಬಲಿ-2 ವಿರುದ್ಧವೇ ಯಾಕೆ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.