Publish Date: Fri, 01 Jul 2022 (09:30 IST)
Updated Date: Fri, 01 Jul 2022 (09:32 IST)
ಬೆಂಗಳೂರು: ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿರುವ ನಟಿ ಪ್ರಣೀತಾ ಸುಭಾಷ್ ಹಿಂದೂಗಳ ಜೀವಕ್ಕೂ ಬೆಲೆಯಿದೆ ಎಂದಿದ್ದಾರೆ.
ನೂಪುರ್ ಶರ್ಮಾಗೆ ಬೆಂಬಲ ನೀಡಿದ್ದಾರೆಂಬ ಏಕೈಕ ಕಾರಣಕ್ಕೆ ಇಬ್ಬರು ಮುಸ್ಲಿಂ ಧರ್ಮೀಯರಾದ ಮೊಹಮ್ಮದ್ ಗೌಸ್ ಮತ್ತು ಮೊಹಮ್ಮದ್ ರಿಯಾಜ್ ಅಖ್ತರ್ ಎಂಬಿಬ್ಬರು ಟೈಲರ್ ಕನ್ನಯ್ಯ ಲಾಲ್ ನ್ನು ಹತ್ಯೆ ಮಾಡಿದ್ದರು. ಈ ಪ್ರಕರಣ ಹಿಂದೂ ಸಮುದಾಯದವರ ಆಕ್ರೋಶ ಹೆಚ್ಚಿಸಿದೆ.
ಘಟನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಟಿ ಪ್ರಣೀತಾ ಸುಭಾಷ್, ಕನ್ನಯ್ಯ ಲಾಲ್ ಹತ್ಯೆಯನ್ನು ಖಂಡಿಸಿದ್ದು, ಹಿಂದೂಗಳ ಜೀವಕ್ಕೂ ಬೆಲೆ ಇದೆ ಎಂಬ ಫೋಟೋ ಪ್ರಕಟಿಸಿದ್ದಾರೆ.