Webdunia - Bharat's app for daily news and videos

Install App

ಪ್ರಭುದೇವ-ಶಿವಣ್ಣ ಡ್ಯಾನ್ಸ್, ಉಪೇಂದ್ರ ಸಾಂಗ್: ಕರಟಕ ದಮನಕ ಹಾಡು ಇಂದು ರಿಲೀಸ್

Krishnaveni K
ಶನಿವಾರ, 10 ಫೆಬ್ರವರಿ 2024 (11:52 IST)
Photo Courtesy: Twitter
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಸಿನಿಮಾಗಳೆಂದರೆ ಹಾಡಿನ ಸಾಹಿತ್ಯವೇ ಎಲ್ಲರ ಗಮನ ಸೆಳೆಯುವಂತಿರುತ್ತದೆ. ಇದೀಗ ಪ್ರಭುದೇವ-ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕರಟಕ ದಮನಕ ಚಿತ್ರದ ಹಾಡು ರಿಲೀಸ್ ಆಗುತ್ತಿದೆ.

ಕರಟಕ ದಮನಕ ಎನ್ನುವ ಟೈಟಲ್ ಹೆಸರೇ ವಿಚಿತ್ರವಾಗಿದೆ. ಜೊತೆಗೆ ಈ ಸಿನಿಮಾದ ವಿಶಿಷ್ಟ ಸಾಲುಗಳಿಗೆ ‘ಡೀಗ ಡಿಗರಿ’ ಎನ್ನುವ ಟಪ್ಪಾಂಗುಚಿ ಹಾಡು ಇಂದು ಬಿಡುಗಡೆಯಾಗುತ್ತಿದೆ. ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿರುವುದು ವಿಶೇಷ. ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ ಪ್ರಭುದೇವ  ಜೊತೆಗೆ ಶಿವಣ್ಣ ಈ ಟಪ್ಪಾಂಗುಚಿ ಹಾಡಿಗೆ ಯಾವ ಲೆವೆಲ್ ಗೆ ಹೆಜ್ಜೆ ಹಾಕಿರಬಹುದು ಎಂದು ಊಹಿಸಿದರೇ ಮೈನವಿರೇಳುತ್ತದೆ.

ಭಟ್ಟರ ವಿಚಿತ್ರ ಸಾಲುಗಳು
ಈ ಹಿಂದೆ ಡಿಂಗಚಕ್ಕಾ ಡಿಂಗಚಕ್ಕಾ ಎನ್ನುವ ವಿಚಿತ್ರ ಸಾಲಿನ ಹಾಡೊಂದು ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದ್ದು ಗಮನಿಸಿರಬಹುದು. ಇದೀಗ ಅಂತಹದ್ದೇ ಸಾಲನ್ನು ಯೋಗರಾಜ್ ಭಟ್ ಕರಟಕ ದಮನಕ ಸಿನಿಮಾಗೆ ಬರೆದಿದ್ದಾರೆ. ಈ ಹಾಡಿಗೆ ‘ಟುಮುಕು ಟುಮುಕು ಟುಮುಕಿಸಿ, ಡಿಚ್ಕಿ ಡಿಮಿ ಡಿಜೆ ಮಿಕ್ಸು’ ಎಂಬ ಸಾಲುಗಳಿವೆ. ಈ ಸಾಲುಗಳನ್ನು ನೋಡಿ ರೆಕಾರ್ಡ್ ನಲ್ಲಿ ಗಾಬರಿಯಾದ ಉಪೇಂದ್ರ ಅಲ್ಲಿಗೇ ಭಟ್ಟರನ್ನು ಕರೆಸಿಕೊಂಡು ಸಾಹಿತ್ಯವನ್ನು ಅವರಿಂದಲೇ ಹೇಳಿಸಿ ಕನ್ ಫರ್ಮ್ ಮಾಡಿಕೊಂಡು ಹಾಡಿದ್ದಾರೆ. ಸಾಲುಗಳನ್ನು ನೋಡಿ ಬಿದ್ದೂ ಬಿದ್ದು ನಕ್ಕ ಉಪೇಂದ್ರ ಭಟ್ರೇ ನೀವು ಗ್ರೇಟೆಸ್ಟ್ ರೈಟರ್ ಎಂದು ಹೊಗಳಿದ್ದಾರೆ.

ಯುವ ಜನರಿಗೆ ಈ ಹಾಡು ಇಷ್ಟವಾಗುವುದು ಗ್ಯಾರಂಟಿ. ಅದರಲ್ಲೂ ಉಪೇಂದ್ರ ಇಂತಹ ಎಷ್ಟೋ ಟಪ್ಪಾಂಗುಚ್ಚಿ ಹಾಡುಗಳನ್ನು ಹಾಡಿದ್ದಾರೆ. ಅವರ ಧ್ವನಿಯಲ್ಲಿ ಇಂತಹ ಹಾಡುಗಳನ್ನು ಕೇಳುವುದೇ ಖುಷಿ. ಹೀಗಾಗಿ ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿರುವ ಈ ಹಾಡಿನ ಬಗ್ಗೆ ಎಲ್ಲರಲ್ಲೂ ನಿರೀಕ್ಷೆಗಳಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ನಟನಾಗಿ ಗೆದ್ದ ಯುವ ರಾಜ್ ಕುಮಾರ್: ಎಕ್ಕ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು

43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

ಭಾಗ್ಯಲಕ್ಷ್ಮೀ ಸೀರಿಯಲ್‌, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್‌

ಎಕ್ಕ ಮೂವಿ ಹೇಗಿದೆ: ಫಸ್ಟ್ ಹಾಫ್ ನೋಡಿದ ಪ್ರೇಕ್ಷಕರು ಏನಂತಿದ್ದಾರೆ

ಮುಂದಿನ ಸುದ್ದಿ
Show comments