Webdunia - Bharat's app for daily news and videos

Install App

ಮತ್ತೇ ಧೂಳೆಬ್ಬಿಸಿದ ಪ್ರಭಾಸ್: ನಾಲ್ಕನೇ ದಿನದಲ್ಲಿ ಹಾಕಿದ ಬಂಡವಾಳ ಬಾಚಿಕೊಳ್ಳುತ್ತಾ 'ಕಲ್ಕಿ'

Sampriya
ಭಾನುವಾರ, 30 ಜೂನ್ 2024 (13:16 IST)
Photo Courtesy X
ಮುಂಬೈ:  ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾದ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾದ ಭರ್ಜರಿ ಕಲೆಕ್ಷನ್‌ನೊಂದಿಗೆ ಥಿಯೇಟರ್‌ಗಳಲ್ಲಿ ಮುನ್ನುಗ್ಗುತ್ತಿದೆ.

ಇನ್ನೂ ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ ₹95.3 ಕೋಟಿ ಸಂಗ್ರಹಿಸುವ ಮೂಲಕ ಹಿಂದಿನ ಬ್ಲಾಕ್‌ಬಸ್ಟರ್‌ ಸಿನಿಮಾದ ಶಾರುಖ್ ಖಾನ್ ನಟನೆಯ ಜವಾನ್ ಕಲೆಕ್ಷನ್‌ ಅನ್ನು ಮೀರಿಸಿದೆ.  ಜವಾನ್ ಸಿನಿಮಾ ಬಿಡುಗಡೆಯಾದ ಮೊದಲ ದಿನ 74 ಕೋಟಿ ಗಳಿಸಿತು.  ಜವಾನ್ ಭಾರತದಲ್ಲಿ ₹ 640.25 ಕೋಟಿ ನಿವ್ವಳ ಸಂಗ್ರಹಿಸಿದೆ ಮತ್ತು ವಿಶ್ವದಾದ್ಯಂತ ಒಟ್ಟು ₹ 1,160 ಕೋಟಿ ಸಂಗ್ರಹಿಸಿದೆ.

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾವನ್ನು ಜೂನ್ 27ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಯಿತು. ಇನ್ನೂ ಶನಿವಾರದಂದು ಚಿತ್ರ ₹ 67.1 ಕೋಟಿ ಕಲೆಕ್ಷನ್ ಮಾಡಿ, ವೀಕೆಂಡ್ ಎಲ್ಲ ಥಿಯೇಟರ್‌ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನೂ ಭಾನುವಾರ ಆಗಿರುವುದರಿಂದ ಇಂದಿನ ಕಲ್ಕಿ ಕೆಲಕ್ಷನ್ ಭಾರತ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ.

ವೈಜಯಂತಿ ಮೂವೀಸ್‌ನಿಂದ 600 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ 'ಕಲ್ಕಿ 2898 AD' ಭಾರತದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗಿದೆ. ಇದು ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆಯೊಂದಿಗೆ, ಡಿಜೋರ್ಡ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ

ಕಲ್ಕಿ 2898 ADಯ ಪ್ರಭಾವಶಾಲಿ ತಾರಾಗಣದಲ್ಲಿ ಸೂಪರ್‌ಸ್ಟಾರ್‌ಗಳಾದ ಪ್ರಭಾಸ್, ದೀಪಿಕಾ ಪಡುಕೋಣೆ ಜೊತೆಗೆ ಚಲನಚಿತ್ರ ದಂತಕಥೆಗಳಾದ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಇದ್ದಾರೆ. ದಿಶಾ ಪಟಾನಿ ಕೂಡ ಚಿತ್ರದ ಭಾಗವಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments