ಸಾಹೋ ನಂತರ ಪ್ರಭಾಸ್ ಮುಂದಿನ ಸಿನಿಮಾ ಫಿಕ್ಸ್

ಶುಕ್ರವಾರ, 13 ಸೆಪ್ಟಂಬರ್ 2019 (09:09 IST)
ಹೈದರಾಬಾದ್: ಸಾಹೋ ಭರ್ಜರಿ ಗಳಿಕೆ ಮಾಡಿ ಮುನ್ನುಗ್ಗುತ್ತಿದ್ದಂತೆಯೇ ರೆಬಲ್ ಸ್ಟಾರ್ ಪ್ರಭಾಸ್ ಹೊಸ ಸಿನಿಮಾಗೆ ತಯಾರಿ ನಡೆಸಿದ್ದಾರೆ.


ಪ್ರಭಾಸ್ ಬಾಹುಬಲಿ ಮತ್ತು ಸಾಹೋದಲ್ಲಿ ಭರ್ಜರಿ ಆಕ್ಷನ್ ಮೂಲಕ ಮಿಂಚಿದ್ದರು. ಈ ಎರಡೂ ಸಿನಿಮಾಗಳಲ್ಲಿ ಪ್ರಭಾಸ್ ದೇಹ ಬೆಳೆಸಿಕೊಳ್ಳಬೇಕಿತ್ತು. ಆದರೆ ಮುಂದಿನ ಸಿನಿಮಾದಲ್ಲಿ ಪ್ರಭಾಸ್ ಪಕ್ಕಾ ರೊಮ್ಯಾಂಟಿಕ್ ರೋಲ್ ಮಾಡಲಿದ್ದು, ಇದಕ್ಕಾಗಿ ಈಗ ತೂಕ ಇಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರಂತೆ.

ಪ್ರಭಾಸ್ ಮುಂದಿನ ಸಿನಿಮಾಗೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಆದರೆ ಪೂಜಾ ಹೆಗ್ಡೆ ಜತೆ ತೆರೆ ಹಂಚಿಕೊಳ್ಳಲಿರುವುದು ಪಕ್ಕಾ. ಈ ಸಿನಿಮಾ ಈಗಾಗಲೇ ಸೆಟ್ಟೇರಿದ್ದು, ಇದು ರೆಬಲ್ ಸ್ಟಾರ್ ನ 20 ನೇ ಸಿನಿಮಾವಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೈಲ್ವಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ, ಅಭಿಮಾನಿಗಳ ಕಿಡಿ