Select Your Language

Notifications

webdunia
webdunia
webdunia
webdunia

ಉತ್ತಮ ಪರಿಸರ ಪ್ರೇಮಿ ಎಂಬುದನ್ನು ಸಾಬೀತುಪಡಿಸಿದ ನಟ ಪ್ರಭಾಸ್

ಉತ್ತಮ ಪರಿಸರ ಪ್ರೇಮಿ ಎಂಬುದನ್ನು ಸಾಬೀತುಪಡಿಸಿದ ನಟ ಪ್ರಭಾಸ್
ಹೈದರಾಬಾದ್ , ಮಂಗಳವಾರ, 8 ಸೆಪ್ಟಂಬರ್ 2020 (10:19 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅವರು ಅರಣ್ಯ ಪ್ರದೇಶವನ್ನು ದತ್ತು ಪಡೆಯುವುದರ ಮೂಲಕ ಉತ್ತಮ ನಟ ಮಾತ್ರವಲ್ಲ ಪರಿಸರ ಪ್ರೇಮಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ನಟ ಹೈದರಾಬಾದ್ ಸಮೀಪದ ಕಾಜಿಪಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ದತ್ತು ಪಡೆದಿದ್ದಾರೆ. ಇದು ಬರೋಬರಿ 1650 ಎಕರೆ ವಿಸ್ತೀರ್ಣವಿದೆ. ಈ ಅರಣ್ಯದಲ್ಲಿ ಹೆಚ್ಚೆಚ್ಚು ಥರಹೇವಾರಿ ಸಸಿಗಳನ್ನು ನೆಟ್ಟು ಅಲ್ಲಲ್ಲಿ ಕೊಳಗಳನ್ನು ನಿರ್ಮಿಸಿ ವನ್ಯ ಪ್ರಾಣಿಗಳಿಗೆ ಓಡಾಡಲು ವ್ಯವಸ್ಥೆ ಮಾಡುವುದಾಗಿ ಅವರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರಭಾಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಮಾಡುತ್ತಾ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೋಗಿನಪಲ್ಲಿ, ತೆಲಂಗಾಣ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಹಾಗೇ ಎಲ್ಲರೂ ಪರಿಸರ ಸಂರಕ್ಷಿಸುವಂತೆ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನ ಖ್ಯಾತ ಖಳನಟ ಜಯಪ್ರಕಾಶ್ ರೆಡ್ಡಿ ನಿಧನ