Select Your Language

Notifications

webdunia
webdunia
webdunia
webdunia

ಬ್ಯಾನರ್ ಕಟ್ಟುವಾಗ ಪ್ರಾಣ ಕಳೆದುಕೊಂಡ ಪ್ರಭಾಸ್ ಅಭಿಮಾನಿ

ಬ್ಯಾನರ್ ಕಟ್ಟುವಾಗ ಪ್ರಾಣ ಕಳೆದುಕೊಂಡ ಪ್ರಭಾಸ್ ಅಭಿಮಾನಿ
Hyderabad , ಸೋಮವಾರ, 24 ಅಕ್ಟೋಬರ್ 2016 (09:48 IST)
ಹೈದಾರಾಬಾದ್: ಬಾಹುಬಲಿ ಹೀರೋ ಪ್ರಭಾಸ್ ಗೆ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಅಂತಹ ಹುಚ್ಚು ಅಭಿಮಾನಕ್ಕೆ ಓರ್ವ ವ್ಯಕ್ತಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಭಾನುವಾರವಷ್ಟೇ ಪ್ರಭಾಸ್ ತಮ್ಮ 37 ನೇ ಜನ್ಮ ದಿನ ಆಚರಿಸಿಕೊಂಡರು. ಇದೇ ವೇಳೆ ಅವರ ರಾಜ್ಯಾದ್ಯಂತ ಇರುವ ಅವರ ಅಭಿಮಾನಿಗಳು ಭರ್ಜರಿಯಾಗಿಯೇ ನಟನ ಹುಟ್ಟುಹಬ್ಬ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ನಿಝಾಮಾಬಾದ್ ನ ಪ್ರಶಾಂತ್ ಎನ್ನುವಾತ ಪ್ರಭಾಸ್ ಬ್ಯಾನರ್ ಕಟ್ಟುವ ಭರದಲ್ಲಿ ಜೀವಂತ ವಿದ್ಯುತ್ ತಂತಿ ಸ್ಪರ್ಶಿಸಿದ್ದ. ಪರಿಣಾಮ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸ್ಥಳದಲ್ಲಿದ್ದಅಭಿಮಾನಿ ವೃಂದ ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಟ್ಟಪ್ಪನಿಗೆ ಫಿದಾ ಆದ ಆಸೀಸ್ ವೇಗಿ ಮಾಡಿದ್ದೇನು?