Publish Date: Mon, 24 Oct 2016 (09:40 IST)
Updated Date: Mon, 24 Oct 2016 (09:47 IST)
ಬಾಹುಬಲಿ.. ಟಾಲಿವುಡ್ನಿಂದ ಹಾಲಿವುಡ್ವರೆಗೆ ಹುಬ್ಬೇರಿಸಿದ ಸಿನಿಮಾ. ಈ ಸಿನಿಮಾ ಮಾಡಿದ ಮೋಡಿಯೇ ಅಂತದ್ದು
ಮತ್ತೀಗ ಇದರ ಹವಾ ಕ್ರಿಕೆಟ್ ದುನಿಯಾದಲ್ಲೂ ಶುರುವಾಗಿದೆ. ಆಸೀಸ್ ಕ್ರಿಕೆಟಿಗನೊಬ್ಬ ಈ ಚಿತ್ರವನ್ನು 10 ಬಾರಿ ನೋಡಿದ್ದಾನಂತೆ. ಚಿತ್ರದಲ್ಲಿನ ಸಾಹಸಮಯ ದೃಶ್ಯಗಳಿಗೆ ಮಾರು ಹೋಗಿರುವ ಆತನಿಗೆ ಸಂಪೂರ್ಣ ಸಿನಿಮಾದಲ್ಲಿ ತುಂಬಾ ಇಷ್ಟವಾದ ಪಾತ್ರ ಯಾವುದು? ಆ ಪಾತ್ರಕ್ಕೆ ಫಿದಾ ಆದ ಆತ ಮಾಡಿದ್ದೇನು ಗೊತ್ತಾ? ತಿಳಿಯಲು ಮುಂದೆ ಓದಿ.
ರಾಜಮೌಳಿ ನಿರ್ದೇಶಿಸಿದ ಅಪ್ರತಿಮ ಸಿನಿಮಾ ಬಾಹುಬಲಿಗೆ ಮರುಳಾಗಿರುವ ಆಸೀಸ್ ವೇಗಿ ಡಗ್ ಬೊಲಿಂಜರ್ ಚಿತ್ರವನ್ನು ಪದೇ ಪದೇ ನೋಡಿದ್ದಾರಂತೆ. ಈ ಸಿನಿಮಾ ಕಥೆಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಅವರು. ಅದರಲ್ಲೂ ಕಟ್ಟಪ್ಪನ ಪಾತ್ರ ಅವರಿಗೆ ಅದೆಷ್ಟು ಮೋಡಿ ಮಾಡಿದೆ ಎಂದರೆ ಅವರೀಗ ತಮ್ಮ ಗೆಟಪ್ನ್ನು ಕೂಡ ಕಟ್ಟಪನ ತರಹ ಬದಲಾಯಿಸಿಕೊಂಡಿದ್ದಾರೆ. ಆತನಂತೆ ಗಡ್ಡ ಬಿಟ್ಟು ಮಿಂಚುತ್ತಿದ್ದಾರೆ. ಸಿನಿಮಾವನ್ನು ಕೊನೆಯವರೆಗೂ ನೋಡುವಂತೆ ಮಾಡುವವನೇ ಕಟ್ಟಪ್ಪ ಎಂದು ಅವರು ಗುಣಗಾನ ಮಾಡಿದ್ದಾರೆ.
ಅವರೆನ್ನುತ್ತಾರೆ: ಬಾಹುಬಲಿ ಸಿನಿಮಾದಲ್ಲಿ ನನಗೆ ಕಟ್ಟಪ್ಪನ ಪಾತ್ರ ತುಂಬಾ ಇಷ್ಟವಾಯಿತು. ಮೊದಲಿನಿಂದ ಕೊನೆಯವರೆಗೂ ಆತ ಸ್ವಾಮಿ ನಿಷ್ಠನಾಗಿರುತ್ತಾನೆ. ಆತನಂತೆ ನಾನು ಕೂಡ ಆಸೀಸ್ ತಂಡದ ನಿಷ್ಠಾವಂತ ಆಟಗಾರ ಆಟಗಾರ. ಪ್ರಾಮಾಣಿಕವಾಗಿ ದೇಶಕ್ಕಾಗಿ ಆಡುತ್ತೇನೆ.
ಕಟ್ಟಪ್ಪನ ಪಾತ್ರ ಅವರಿಗೆ ಹುಚ್ಚು ಹಿಡಿಸಿರುವುದು ಸತ್ಯ. ಜತೆಗೆ ಅಂತಹ ಪ್ರಾಮಾಣಿಕ ಯೋಧ ಕೊನೆಗೆ ಬಾಹುಬಲಿಯನ್ನು ಕೊಂದಿದ್ದು ಏಕೆ ಎಂಬ ಪ್ರಶ್ನೆ ಸಿನಿಮಾ ನೋಡಿದ ಎಲ್ಲರಂತೆ ಅವರಿಗೂ ಕಾಡುತ್ತಿದೆ. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಬಾಹುಬಲಿ - 2 ನೋಡುವುದಕ್ಕೆ ನಾನು ಕಾತರದಿಂದ ಕಾಯುತ್ತಿದ್ದೇನೆ ಎನ್ನುತ್ತಾರೆ ಬೊಲಿಂಜರ್ .
ಒಟ್ಟಿನಲ್ಲಿ ಬಾಹುಬಲಿ ಸಿನಿಮಾದ ಈ ಖ್ಯಾತಿ ಭಾರತೀಯ ಸಿನಿರಂಗದ ಯಶಸ್ಸಿಗೆ ಬಹುದೊಡ್ಡ ಉದಾಹರಣೆ. ಜತೆಗೆ ಕಟ್ಟಪ್ಪನ ಪಾತ್ರ ಪ್ರಾಮಾಣಿಕತೆ ಪಾಠ ಕಲಿಸಿರುವುದು ಒಂದು ಸಿನಿಮಾ ಪಾತ್ರ ಪ್ರೇಕ್ಷಕನ ಮೇಲೆ ಬೀರುವ ಪರಿಣಾಮಕ್ಕೆ ಸಾಕ್ಷಿ.