Publish Date: Thu, 08 Jun 2017 (11:02 IST)
Updated Date: Thu, 08 Jun 2017 (11:05 IST)
ಹೈದರಾಬಾದ್: ಬಾಹುಬಲಿಯ ಲುಕ್ ಬದಲಾಗಿದೆ. ಈಗ ನೋಡಿದರೆ ಅವರನ್ನು ಗುರುತು ಹಿಡಿಯುವುದೂ ಕಷ್ಟ. ಹಾಗೆ ಬದಲಾಗಿದ್ದಾರೆ ಬಾಹುಬಲಿ ಹೀರೋ ಪ್ರಭಾಸ್.
ಬಾಹುಬಲಿ ಯಶಸ್ಸಿನ ಬೆನ್ನಲ್ಲೇ ಅಮೆರಿಕಾದಲ್ಲಿ ರಜಾ ಮಜಾ ಮುಗಿಸಿ ಭಾರತಕ್ಕೆ ಬಂದಿಳಿಯುವಷ್ಟರಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಹುಬಲಿ ಚಿತ್ರದಲ್ಲಿದ್ದ ಉದ್ದ ಕೂದಲು, ದಾಡಿ, ದಪ್ಪ ಮೀಸೆಗೆ ಕತ್ತರಿ ಹಾಕಿ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಇದೆಲ್ಲಾ ಅವರ ಮುಂದಿನ ಚಿತ್ರ ಸಾಹೋ ಗಾಗಿ ಎಂದು ಅಂದಾಜಿಸಲಾಗಿದೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ಆರಾಧ್ಯ ದೈವದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.