Publish Date: Thu, 08 Jun 2017 (09:35 IST)
Updated Date: Thu, 08 Jun 2017 (09:37 IST)
ಬೆಂಗಳೂರು: ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಕ್ವೀನ್ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ದೇಶಿಸಲಿದ್ದಾರೆ ಎನ್ನುವುದು ಈಗಾಗಲೇ ಗೊತ್ತಾಗಿದೆ.
ಬಾಲಿವುಡ್ ನಲ್ಲಿ ಕಂಗನಾ ರನಾವತ್ ಮಾಡಿದ್ದ ಮುಖ್ಯ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡಲಿದ್ದಾರೆ ಎಂಬುದು ಈಗಾಗಲೇ ಘೋಷಣೆಯಾಗಿದೆ. ಅದಕ್ಕಾಗಿ ಚಿತ್ರತಂಡ ಒಂದು ಪಾರ್ಟಿಯನ್ನೂ ಆಯೋಜಿಸಿ ಬಟರ್ ಫ್ಲೈ ಎಂದು ಚಿತ್ರದ ಹೆಸರಿಟ್ಟಿರುವುದಾಗಿ ಘೋಷಿಸಿತ್ತು.
ಇದೀಗ ತಮಿಳಿನಲ್ಲಿ ಮುಖ್ಯ ಪಾತ್ರ ಮಾಡುವವರು ಯಾರು ಎಂಬ ಚರ್ಚೆಗಳು ನಡೆದಿವೆ. ಮೂಲವೊಂದರ ಪ್ರಕಾರ ಕಾಜಲ್ ಅಗರ್ ವಾಲ್ ಈ ಪಾತ್ರ ನಿರ್ವಹಿಸುವ ಸಾಧ್ಯೆಯಿದೆ ಎನ್ನಲಾಗಿದೆ. ರಮೇಶ್ ಅರವಿಂದ್ ಎರಡೂ ಭಾಷೆಗಳಲ್ಲಿ ನಿರ್ದೇಶನ ಮಾಡಲಿದ್ದಾರೆ. 120 ದಿನಗಳ ಅವಧಿಯಲ್ಲಿ ತಮಿಳು ಮತ್ತು ಕನ್ನಡ ಸಿನಿಮಾಗಳ ಚಿತ್ರೀಕರಣ ಪೂರೈಸುವ ಯೋಜನೆ ಹಾಕಿದ್ದಾರೆ ರಮೇಶ್. ತಮಿಳು ಮತ್ತು ಕನ್ನಡದ ಪ್ರಮುಖ ನಟರು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.