Big Boss Season 11: ಸೈಲೆಂಟ್ ಆದ ಶೋಭಾಗೆ ಕಳಪೆ ಪಟ್ಟ, ಜೈಲಿನಲ್ಲಿ ಕಣ್ಣೀರು

Sampriya
ಶುಕ್ರವಾರ, 29 ನವೆಂಬರ್ 2024 (15:50 IST)
Photo Courtesy X
ವೈಲ್ಡ್ ಕಾರ್ಡ್ ಆಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಮೊದಲು ಮಂಜು ವಿರುದ್ಧ ಗುಡುಗಿ, ಭರ್ಜರಿ ವಾದ ನಡೆಸಿದ್ದರು. ಮಂಜಣ್ಣ ಮಾತಿನ ಏಟಿಗೆ ಎದುರೇಟು ನೀಡಿದ್ದ ಶೋಭಾ ಶೆಟ್ಟಿ ಇದೀಗ ಎಂಟ್ರಿ ಕೊಟ್ಟ ಎರಡನೇ ವಾರದಲ್ಲಿ ಕಳಪೆ ಪಟ್ಟದೊಂದಿಗೆ ಜೈಲು ಸೇರಿದ್ದಾರೆ.  

ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್​ನಲ್ಲಿ ಸಾಕಷ್ಟು ಆವೇಶದಿಂದ ಆಟ ಆಡಿ, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇದನ್ನು ನೋಡಿ ಶೋಭಾ ಅವರು ಕನ್ನಡ ಬಿಗ್‌ಬಾಸ್‌ನಲ್ಲೂ ಅದೇ ಆಟವನ್ನು ಮುಂದುವರಿಸಬಹುದು ಎಂದು ನಿರೀಕ್ಷಿಸಿದ್ದರು.

ಮೊದಲ ಟಾಸ್ಕ್​ನಲ್ಲಿ ಇಂಜುರಿ ಹಾಗೂ ಸೋಲಿನ ಕಾರಣಕ್ಕೆ ಶೋಭಾ ಕಣ್ಣೀರು ಹಾಕಿದ್ದರು. ಈಗ ಅವರು ಮತ್ತೆ ಅತ್ತಿದ್ದಾರೆ. ಇದಕ್ಕೆ ಕಾರಣ ಈ ವಾರ ಆಟವಾಡಲು ಅವಕಾಶ ಸಿಗದಿದ್ದಕ್ಕೆ ಹಾಗೂ ಅದೇ ವಿಷಯಕ್ಕೆ ಕಳಪೆ ನೀಡಿರುವುದಕ್ಕೆ ಇದೀಗ ಶೋಭಾ ಕಣ್ಣೀರು ಹಾಕಿದ್ದಾರೆ.

<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments