Webdunia - Bharat's app for daily news and videos

Install App

ಅಯೋಧ್ಯೆಯ ಜನರು ನಾಚಿಕೆಪಡಬೇಕು: ಸೋನು ನಿಗಮ್ ಆಕ್ರೋಶದ ಹಿಂದಿರುವ ಅಸಲಿ ಕಾರಣವೇನು

sampriya
ಗುರುವಾರ, 6 ಜೂನ್ 2024 (17:32 IST)
Photo By X
ಮುಂಬೈ: ಲೋಕಸಭೆ ಚುನಾವಣೆಗಳ ಫಲಿತಾಂಶ ಹೊರಬಿದ್ದು ದಿನಗಳಾಗುತ್ತಾ ಬಂದರೂ ಬಿಜೆಪಿ ಜಸ್ಟ್‌ ಪಾಸ್‌ ಆಗಿರುವುದು ಬಿಜೆಪಿ ವಲಯಕ್ಕೆ ದೊಡ್ಡ ಆಘಾತತಂದಿದೆ. ಅದರಲ್ಲೂ ಬಿಜೆಪಿ ಪಕ್ಷ  ಅಯೋಧ್ಯೆ ಮತ್ತು ಹೊಸದಾಗಿ ನಿರ್ಮಿಸಲಾದ ರಾಮಮಂದಿರವನ್ನು ಹೊಂದಿರುವ ಫೈಜಾಬಾದ್‌ನಲ್ಲಿ ಹೀನಾಯ ಸೋಲು ಕಂಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಇನ್ನೂ ಅಯೋದ್ಯೆಯಲ್ಲಿ ಸೋಲು ಕಂಡಿರುವುದಕ್ಕೆ  ಖ್ಯಾತ ಗಾಯಕ ಸೋನು ನಿಗಮ್ ಅವರ ಆಕ್ರೋಶ ಹೊರಹಾಕಿರುವ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋನು ನಿಗಮ್ ಪೋಸ್ಟ್‌ನಲ್ಲಿ ಹೀಗಿದೆ.

ಅಯೋಧ್ಯೆ ಮತದಾರರು ತಮ್ಮ ಶ್ರಮದ ಹೊರತಾಗಿಯೂ ಬಿಜೆಪಿಯನ್ನು ಆಯ್ಕೆ ಮಾಡಲಿಲ್ಲ ಎಂದು ಸೋನು ನಿಗಮ್ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ, “ಇಡೀ ಅಯೋಧ್ಯೆಯನ್ನು ಸುಂದರಗೊಳಿಸಿದ ಸರ್ಕಾರ, ಹೊಸ ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ನೀಡಿತು, 500 ವರ್ಷಗಳ ನಂತರ ರಾಮ ಮಂದಿರವನ್ನು ನಿರ್ಮಿಸಿತು, ಸಂಪೂರ್ಣ ದೇವಾಲಯದ ಆರ್ಥಿಕತೆಯನ್ನು ಸೃಷ್ಟಿಸಿತು, ಆ ಪಕ್ಷವು ಅಯೋಧ್ಯೆ ಸ್ಥಾನಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಅಯೋಧ್ಯೆಯ ಜನರು ನಾಚಿಕೆಪಡಬೇಕು ಎಂದು ಬರೆದುಕೊಂಡಿರುವ ಪೋಸ್ಟ್‌ ವೈರಲ್‌ ಆಗಿದೆ.

ನಿಜವಾದ ಸತ್ಯ: ಆದಾಗ್ಯೂ, ನಿಜವಾದ ಸತ್ಯ ಏನೆಂದರೆ  ಈ ಪೋಸ್ಟ್‌ ಮಾಡಿರುವುದು ಸೋನು ನಿಗಮ್‌ ಅವರಲ್ಲ ಎಂದು ತಿಳಿದುಬಂದಿದೆ.

ಇದನ್ನು ಸ್ಪಷ್ಟಪಡಿಸಿದ ಸೋನು ಸೂದು ಅವರು, ಈ ರಿತಿಯ ಘಟನಾವಳಿಗಳಿಂದಲೇ ನಾನು ಏಳು ವರ್ಷಗಳ ಹಿಂದೆ ಟ್ವಿಟರ್‌ ಖಾತೆಯಿಂದ ಹೊರ ಬಂದಿರುವುದು.  ಸಂವೇದನಾಶೀಲ ರಾಜಕೀಯ ಟೀಕೆಗಳನ್ನು ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ ಮತ್ತು ನಾನು ನನ್ನ ಕೆಲಸದ ಮೇಲೆ ಮಾತ್ರ ಗಮನಹರಿಸುತ್ತೇನೆ. ಆದರೆ ಈ ಘಟನೆಯು ನನಗೆ ಮಾತ್ರವಲ್ಲ, ನನ್ನ ಕುಟುಂಬದ ಸುರಕ್ಷತೆಗೂ ಆತಂಕಕಾರಿಯಾಗಿದೆ, ”ಎಂದು ಅವರು ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments