Webdunia - Bharat's app for daily news and videos

Install App

ಈ ಒಬ್ಬ ವ್ಯಕ್ತಿಯನ್ನು ನೆಪ ಮಾಡಿ ಜಾಮೀನು ರದ್ದು ಮಾಡಬೇಡಿ ಎನ್ನುತ್ತಿರುವ ಪವಿತ್ರಾ ಗೌಡ

Krishnaveni K
ಬುಧವಾರ, 6 ಆಗಸ್ಟ್ 2025 (13:11 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ತೀರ್ಪು ಬರಬೇಕಿದ್ದು, ಇದಕ್ಕೆ ಮೊದಲು ಆರೋಪಿಗಳು ಕೋರ್ಟ್ ಗೆ ಜಾಮೀನು ರದ್ದುಗೊಳಿಸದೇ ಇರಲು ಲಿಖಿತ ಕಾರಣಗಳನ್ನು ಸಲ್ಲಿಸಿದ್ದಾರೆ.

ಈ ಪೈಕಿ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ತಮ್ಮ ಲಿಖಿತ ಕಾರಣಗಳನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಆ ಪೈಕಿ ಪವಿತ್ರಾ ಗೌಡ ಈ ಒಬ್ಬ ವ್ಯಕ್ತಿಯನ್ನು ನೆಪ ಮಾಡಿಕೊಂಡು ಜಾಮೀನು ರದ್ದು ಮಾಡಬೇಡಿ ಎಂದು ಅಂಗಲಾಚಿದ್ದಾರೆ.

ತಮ್ಮ ಮಗಳನ್ನು ನೆಪ ಮಾಡಿ ಪವಿತ್ರಾ ಜಾಮೀನು ರದ್ದುಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ. ‘ನನಗೆ 10 ನೇ ತರಗತಿ ಓದುವ ಮಗಳಿದ್ದಾಳೆ. ಅವಳಿಗೆ ನಾನೊಬ್ಬಳೇ ಆಧಾರ. ನಾನು ಏಕಾಂಗಿ ಪೋಷಕಳಾಗಿದ್ದೇನೆ. ಜೊತೆಗೆ ನನ್ನ ವಯಸ್ಸಾದ ತಂದೆ-ತಾಯಿಯಿದ್ದು ಅವರಿಗೆ ನಾನೇ ಆಧಾರವಾಗಿದ್ದೇನೆ. ಅವರನ್ನು ನೋಡಿಕೊಳ್ಳುವ ಸಲುವಾಗಿ ಮತ್ತು ಒಬ್ಬ ಮಹಿಳೆ ಎನ್ನುವ ದೃಷ್ಟಿಯಿಂದ ಜಾಮೀನು ರದ್ದುಗೊಳಿಸಬಾರದು’ ಎಂದು ಪವಿತ್ರಾ ಕಾರಣ ನೀಡಿದ್ದಾರೆ.

ಇತ್ತ ದರ್ಶನ್ ಕೂಡಾ ಲಿಖಿತ ಕಾರಣಗಳನ್ನು ನೀಡಿದ್ದು, ತಮ್ಮನ್ನು ಮೈಸೂರಿನಲ್ಲಿ ವಶಕ್ಕೆ ಪಡೆದ ಬಳಿಕ ಎಫ್ಐಆರ್ ಮತ್ತು ಬಂಧನಕ್ಕೆ ಕಾರಣವನ್ನು ತಡವಾಗಿ ಸಂಜೆ ತಿಳಿಸಲಾಗಿತ್ತು. ಇದು ಕಾನೂನಿನ ಉಲ್ಲಂಘನೆಯಾಗಿದೆ. ಇನ್ನು, ಘಟನೆ ಸಂದರ್ಭ ನಾನು ಅಲ್ಲಿದ್ದೆ ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲ. ರೇಣುಕಾಸ್ವಾಮಿಯನ್ನು ಕರೆತರಲು ಸೂಚನೆ ನೀಡಿದ್ದಕ್ಕೂ ಸಾಕ್ಷ್ಯವಿಲ್ಲ. ಹೀಗಾಗಿ ಜಾಮೀನು ರದ್ದುಗೊಳಿಸಬಾರದು ಎಂದು ಕೋರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಮುಂದಿನ ಸುದ್ದಿ
Show comments