Select Your Language

Notifications

webdunia
webdunia
webdunia
webdunia

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

Rockline Venkattesh

Krishnaveni K

ಬೆಂಗಳೂರು , ಶುಕ್ರವಾರ, 1 ಆಗಸ್ಟ್ 2025 (11:15 IST)
ಬೆಂಗಳೂರು: ಸಿನಿಮಾದಲ್ಲಿ ನೀತಿ ಪಾಠ ಹೇಳುವ ನಾವು ನಿಜ ಜೀವನದಲ್ಲಿ 5% ಅಳವಡಿಸಿಕೊಂಡ್ರೂ ಸಾಕು ಎಂದು ದರ್ಶನ್ ಫ್ಯಾನ್ಸ್ ವಾರ್ ಬಗ್ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದ್ದರು. ಇದಕ್ಕೀಗ ಸೋಷಿಯಲ್ ಮೀಡಿಯಾದಲ್ಲಿ ಡಿಬಾಸ್ ಫ್ಯಾನ್ಸ್ ಟಾಂಗ್ ಕೊಟ್ಟಿದ್ದಾರೆ.

ದರ್ಶನ್ ಫ್ಯಾನ್ಸ್ ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿ ನಿಂದಿಸಿದ ಪ್ರಕರಣದ ಬಗ್ಗೆ ಮಾಧ್ಯಮಗಳು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗೆ ಅಭಿಪ್ರಾಯ ಕೇಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು ಸಿನಿಮಾದಲ್ಲಿ ನೀತಿ ಪಾಠ ಹೇಳುವವರು ನಿಜ ಜೀವನದಲ್ಲಿ 5 ಪರ್ಸೆಂಟ್ ಅಳವಡಿಸಿಕೊಂಡ್ರೂ ಸಾಕು ಎಂದಿದ್ದರು. ಇದು ಯಾವ ಸ್ಟಾರ್ ನಟರಿಗೇ ಆಗಲಿ ಅನ್ವಯಿಸುತ್ತದೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡುವಾಗ ಯಾವುದೇ ಸ್ಟಾರ್ ನಟರಾಗಲೀ ಓಪನ್ ಆಗಿ ಹೇಳಬೇಕು. ನನ್ನ ಹೆಸರಿನಲ್ಲಿ ಹೀಗೆಲ್ಲಾ ಮಾಡಬೇಡಿ ಎಂದು ಹೇಳಬೇಕು. ಇಲ್ಲದೇ ಹೋದರೆ ಹೀಗೆಲ್ಲಾ ಆಗುತ್ತದೆ. ಈಗಲೇ ಚಿತ್ರರಂಗದಲ್ಲಿ ಭಾರತ-ಪಾಕಿಸ್ತಾನದ ಸ್ಥಿತಿಯಿದೆ. ಸಿನಿಮಾ ಮಾಡಕ್ಕೇ ಭಯವಾಗುತ್ತದೆ. ಹಿಂದೆಯೂ ಎಲ್ಲಾ ನಟರಿಗೂ ಅವರದ್ದೇ ಆದ ಅಭಿಮಾನಿಗಳಿದ್ದರು. ಆದರೆ ಎಲ್ಲಾ ಸ್ಟಾರ್ ಗಳ ಸಿನಿಮಾವನ್ನು ಎಲ್ಲಾ ಅಭಿಮಾನಿಗಳೂ ನೋಡುತ್ತಿದ್ದಾರೆ. ಆದರೆ ಈಗ ಹಾಗಿಲ್ಲ. ಅದಕ್ಕೇ ಭಯವಾಗುತ್ತಿದೆ ಎಂದಿದ್ದಾರೆ. ಸಿನಿಮಾವನ್ನು ನಂಬಿಕೊಂಡು 10 ಸಾವಿರ ಮಂದಿ ಇದ್ದಾರೆ. ಅವರ ಜೀವನದ ಬಗ್ಗೆ ಯೋಚನೆ ಮಾಡಬೇಕು ಎಂದು ಬುದ್ಧಿವಾದ ಹೇಳಿದ್ದಾರೆ.

ರಾಕ್ ಲೈನ್ ಪ್ರತಿಕ್ರಿಯೆಗಳಿಗೆ ಡಿಬಾಸ್ ಫ್ಯಾನ್ಸ್ ಕಾಮೆಂಟ್ ಮಾಡಿದ್ದು, ದರ್ಶನ್ ಫ್ಯಾನ್ಸ್ ಗಳೇ ಹೀಗೆ ಮಾಡಿದ್ದು ಎಂದು ನಿಮಗೆ ಕನ್ ಫರ್ಮ್ ಆಗಿದ್ಯಾ? ಹೇಗೆ ದರ್ಶನ್ ಫ್ಯಾನ್ಸ್ ಮಾಡಿದ್ದು ಅಂತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಈ ಹಿಂದೆ ದರ್ಶನ್ ಜೊತೆಗೇ ಇದ್ರಿ, ಈಗ ಯಾಕೆ ಡಿ ಬಾಸ್ ನಿಮ್ಮಿಂದ ದೂರ ಹೋಗಿದ್ದಾರೆ ಎಂದು ಈಗ ಗೊತ್ತಾಯ್ತು ಬಿಡಿ ಎಂದಿದ್ದಾರೆ. ಮತ್ತೆ ಕೆಲವರು ಮಂಡ್ಯದಲ್ಲಿ ಮದರ್ ಇಂಡಿಯಾ ಸುಮಲತಾ ಗೆಲುವಿಗೆ ಓಡಾಡಿದ್ದು ಇದೇ ದರ್ಶನ್ ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ