Select Your Language

Notifications

webdunia
webdunia
webdunia
webdunia

ರಾತ್ರೋರಾತ್ರಿ ವಿಷ್ಣು ಸ್ಮಾರಕ ನೆಲಸಮ, ಹಬ್ಬದ ದಿನವೇ ಕಣ್ಣೀರು ಹಾಕುತ್ತಿರುವ ವಿಷ್ಣುವರ್ಧನ್ ಫ್ಯಾನ್ಸ್‌

ಬೆಂಗಳೂರು ವಿಷ್ಣು ಸ್ಮಾರಕ

Sampriya

ಬೆಂಗಳೂರು , ಶುಕ್ರವಾರ, 8 ಆಗಸ್ಟ್ 2025 (15:59 IST)
Photo Credit X
ಬೆಂಗಳೂರು: ವಿಷ್ಣು ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡುವ ಮೂಲಕ ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.  ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸ್ಮಾರಕ ನೆಲಸಮಗೊಂಡಿದೆ.

ಜಾಗದ ವಿಚಾರವಾಗಿ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಪುಣ್ಯಸ್ಮರಣೆಗೂ ಅವಕಾಶ ಕೊಟ್ಟಿರಲಿಲ್ಲ. ಇದೀಗ ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ ಆಗಿದೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. 

35 ವರ್ಷಗಳ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಗೈದು, 200ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಾಸಿ, ಕನ್ನಡಿಗರ ಮನಸ್ಸಲ್ಲಿ ಸಾಹಸಸಿಂಹನಾಗಿ ಮೆರೆದ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್‌ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು. 

ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ಆದ್ರೆ ಹೈಕೋರ್ಟ್‌ ಸೂಚನೆ ಮೇರೆ ರಾತ್ರೋರಾತ್ರಿ ಸಮಾಧಿಯನ್ನ ತೆರವುಗೊಳಿಸಲಾಗಿದೆ. ಇದು ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಕಿಂಗ್ ವಿಷಯಕ್ಕೆ ಕಿರಿಕ್, ಪ್ರಾಣ ಕಳೆದುಕೊಂಡ ಖ್ಯಾತ ನಟಿ ಹುಮಾ ಖುರೇಷಿ ಸಹೋದರ