Publish Date: Mon, 03 Aug 2020 (11:40 IST)
Updated Date: Mon, 03 Aug 2020 (11:43 IST)
ಬೆಂಗಳೂರು: ಕೊರೋನಾ ಮಹಾಮಾರಿ ಬಂದ ಬಳಿಕ ಜಗತ್ತು ಎಷ್ಟು ಬದಲಾಗಿದೆಯೆಂದರೆ ಶಿಕ್ಷಣದಿಂದ ಹಿಡಿದು ಎಲ್ಲವೂ ಆನ್ ಲೈನ್ ಮಯವಾಗಿದೆ.
ಈಗ ಸಿನಿಮಾ ಲೋಕದಲ್ಲೂ ಎಲ್ಲವೂ ಆನ್ ಲೈನ್ ನಲ್ಲೇ ನಡೆಯುತ್ತಿದೆ. ಆನ್ ಲೈನ್ ನಲ್ಲಿ ಸಿನಿಮಾ ಬಿಡುಗಡೆಯಾಗುವುದರಿಂದ ಹಿಡಿದು ತಾರೆಯರ ಬರ್ತ್ ಡೇ, ಸಿನಿಮಾ ವಿಚಾರ, ಇತ್ಯಾದಿಗಳಿಗೂ ಆನ್ ಲೈನ್, ಸಾಮಾಜಿಕ ಜಾಲತಾಣಗಳು ವೇದಿಕೆಯಾಗುತ್ತಿವೆ.
ಎಲ್ಲವೂ ಲಾಕ್ ಡೌನ್ ಇಫೆಕ್ಟ್. ಆದರೆ ಒಂದು ರೀತಿಯಲ್ಲಿ ಇದು ಒಳ್ಳೆಯದೇ ಆದರೂ ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಲ್ಲದ ಪೈಪೋಟಿ ಏರ್ಪಡುತ್ತಿರುವುದು ಮಾತ್ರ ವಿಪರ್ಯಾಸ. ಹಾಗಿದ್ದರೂ ಸಾಮಾಜಿಕ ಜಾಲತಾಣವನ್ನು ಸಿನಿಮಾ ಲೋಕವೂ ತನ್ನ ಪ್ರಚಾರಕ್ಕೆ ಪರಿಣಾಮಕಾರಿಯಾಗಿ ಬಳಸುತ್ತಿದೆ.