Webdunia - Bharat's app for daily news and videos

Install App

ಒನ್ ಲವ್ 2 ಸ್ಟೋರಿ: ಹಾಡು ಕೇಳಿದಾಗೆಲ್ಲ ಲವ್ವಾಗುತ್ತೆ!

Webdunia
ಸೋಮವಾರ, 12 ಆಗಸ್ಟ್ 2019 (16:56 IST)
ಒನ್ ಲವ್ 2 ಸ್ಟೋರಿ ಚಿತ್ರ ನಾನಾ ದಿಕ್ಕುಗಳಿಂದ ಪ್ರೇಕ್ಷಕರನ್ನು ಆವರಿಸಿಕೊಂಡು ಇದೇ ಹದಿನಾರನೇ ತಾರೀಕಿನಂದು ಬಿಡುಗಡೆಯಾಗಲು ರೆಡಿಯಾಗಿದೆ. ಈ ಚಿತ್ರವೀಗ ಟ್ರೈಲರ್ ಕಾರಣದಿಂದ ಸದ್ದು ಮಾಡುತ್ತಿದೆಯಾದರೂ ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪಿಕೊಂಡಿರೋದೇ ಹಾಡುಗಳ ಮೂಲಕ. ಪ್ರತೀ ಹಾಡುಗಳನ್ನೂ ಕೂಡಾ ಮನಸೂರೆಗೊಳ್ಳುವ ಆಮಂತ್ರಣದಂತೆಯೇ ರೂಪಿಸಲಾಗಿದೆ. ಅದಕ್ಕೆ ಜನ ಮನಸೋತು ಹದಿನಾರನೇ ತಾರೀಕಿನಂದು ಥೇಟರಿನಲ್ಲಿ ಹಾಜರಾಗೋ ಮನಸು ಮಾಡುತ್ತಿದ್ದಾರೆ.
ನಿರ್ದೇಶಕ ವಸಿಷ್ಟ ಬಂಟನೂರರ ಪಾಲಿಗೆ ಇದು ಚೊಚ್ಚಲ ಚಿತ್ರ. ಆದರೆ ಪ್ರೇಕ್ಷಕರ ನಾಡಿಮಿಡಿತ ಅರಿಯುವಲ್ಲಿ ಅವರು ಪಳಗಿದ ನಿರ್ದೇಶಕರಂತೆಯೇ ಕಾರ್ಯ ನಿರ್ವಹಿಸಿದ್ದಾರೆ. ಯಾವುದರ ಮೂಲಕ ಎಷ್ಟು ಎಫೆಕ್ಟಿವ್ ಆಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳಬಹುದೆಂಬ ಅಳತೆ ಅವರಿಗೆ ಸ್ಪಷ್ಟವಾಗಿಯೇ ಸಿಕ್ಕಿಬಿಟ್ಟಿದೆ. ಅದರ ಫಲವಾಗಿಯೇ ಅವರು ಸಿನಿಮಾದ ಪ್ರಧಾನ ಅಂಶದಂತಿರೋ ಹಾಡುಗಳನ್ನು ಚೆಂದಗೆ ರೂಪಿಸಿದ್ದಾರೆ. ಅದರಕ್ಕೆ ಕೆಲವಕ್ಕೆ ತಾವೇ ಸಾಹಿತ್ಯವನ್ನೂ ರಚಿಸಿದ್ದಾರೆ.
 
ಈ ಎಲ್ಲ ಹಾಡುಗಳಿಗೂ ಪ್ರೇಕ್ಷಕರ ಕಡೆಯಿಂದ ಸಕಾರಾತ್ಮಕವಾದ ಪ್ರತಿಕ್ರಿಯೆಗಳೇ ಸಿಕ್ಕಿವೆ. ಬಹುಮುಖ ಪ್ರತಿಭೆಯ ವಸಿಷ್ಟ ಬಂಟನೂರು ಈ ಸಿನಿಮಾಗೆ ಕೋರಿಯೋಗ್ರಫಿಯನ್ನೂ ಮಾಡಿದ್ದಾರೆ. ಸ್ವತಃ ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಮೂಲಕ ನಟನಾಗಿಯೂ ಟ್ರೈಲರ್ ಮೂಲಕ ಭರವಸೆ ಮೂಡಿಸಿದ್ದಾರೆ. ಇದೆಲ್ಲದರ ನಡುವೆ ತಾವೇ ಮುಂದೆ ನಿಂತು ಈ ಚಿತ್ರದ ಹಾಡುಗಳನ್ನೂ ರೂಪಿಸಿದ್ದಾರೆ. ಅವರೇ ಬರೆದಿರೋದೂ ಸೇರಿದಂತೆ ಎಲ್ಲ ಹಾಡುಗಳೂ ಕೂಡಾ ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ ಮತ್ತೊಂದ್ ಸಲ ಲವ್ವಾಯ್ತು ಎಂಬ ಹಾಡಂತೂ ಪ್ರೇಮಿಗಳ ಪಾಲಿನ ಹೊಸ ರಾಷ್ಟ್ರಗೀತೆಯಂತೆ ಈ ಕ್ಷಣಕ್ಕೂ ಎಲ್ಲೆಡೆ ಗುನುಗುನಿಸಿಕೊಳ್ಳುತ್ತಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments