ಒನ್ ಲವ್ 2 ಸ್ಟೋರಿಯಲ್ಲಿದೆಯಾ ಗಾಂಧಿನಗರದ ವಾಸ್ತವ ದರ್ಶನ?

ಸೋಮವಾರ, 12 ಆಗಸ್ಟ್ 2019 (16:53 IST)
ಗಾಂಧಿನಗರ ಅಂದರೆ ಸಿನಿಮಾ ಕನಸು ಹೊತ್ತವರ ಪಾಲಿಗೆ ಪ್ರಮುಖ ಕೇಂದ್ರ ಎಂಬಂಥಾ ವಾತಾವರಣ ಬಹು ಹಿಂದಿನಿಂದಲೂ ಇದೆ. ಕರ್ನಾಟಕದ ಯಾವ ಹಳ್ಳಿ ಮೂಲೆಯಿಂದ, ಕೊಂಪೆಗಳಿಂದ ಎದ್ದು ಬಂದರೂ ಗಾಂಧಿನಗರದ ಗಾಳಿ ಸೋಕಿಸಿಕೊಂಡೇ ಕನಸಿನ ಹಾದಿಯಲ್ಲಿ ಹೆಜ್ಜೆಯೂರಬೇಕು. ಆದರೀಗ ಕಾಲ ಬದಲಾಗಿದೆ. ಗಾಂಧಿನಗರದ ಚಹರೆಯೂ ಅದಕ್ಕೆ ತಕ್ಕುದಾಗಿಯೇ ಬದಲಾಗಿದೆ. ಗಾಂಧಿನಗರದ ಮೇಲಿರೋ ಪಾರಂಪರಿಕ ಇಮೇಜೂ ಬದಲಾಗಿದೆ. ಯಾಕೆಂದರೆ ಸಿನಿಮಾ ಮಾಡಲು ಗಾಂಧಿನಗರದಲ್ಲಿ ಅಡ್ಡಾಡಿ ಪಡಿಪಾಟಲು ಅನುಭವಿಸಿದ ಅದೆಷ್ಟೋ ಮಂದಿ ಗಾಂಧಿನಗರದ ಅಸಲೀ ಕಥೆಗಳನ್ನೇ ಸಿನಿಮಾವಾಗಿಸಿಬಿಟ್ಟಿದ್ದಾರೆ!
ಒನ್ ಲವ್ 2 ಸ್ಟೋರಿ ಚಿತ್ರದಲ್ಲಿಯೂ ಕೂಡಾ ಅಂಥಾದ್ದೊಂದು ಪ್ರಯತ್ನ ನಡೆದಿದೆಯಾ? ಹೀಗೊಂದು ಪ್ರಶ್ನೆ ಹುಟ್ಟು ಹಾಕುವಂಥಾ ವಿಚಾರಗಳು ಟ್ರೇಲರ್ನಲ್ಲಿ ಕಂಡಿವೆ. ಈ ಚಿತ್ರದಲ್ಲಿ ನಿದೇಶನದೊಂದಿಗೆ ಹಲವಾರು ಜವಾಬ್ದಾರಿಗಳನ್ನು ಹೊತ್ತುಕೊಂಡಿರುವ ವಸಿಷ್ಟ ಬಂಟನೂರು ಒಂದು ಪಾತ್ರವನ್ನೂ ಮಾಡಿದ್ದಾರೆ. ಆ ಪಾತ್ರ ಗಾಂಧಿನಗರದ ಆಸಾಮಿಯೋರ್ವನ ಬಳಿ ನಡೆಸೋ ಸಂಭಾಷಣೆಯ ತುಣುಕೀಗ ಎಲ್ಲೆಡೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅದು ಸಖತ್ ಫೇಮಸ್ ಆಗಿ ಬಿಟ್ಟಿದೆ.
 
ವಸಿಷ್ಟ ಬಂಟನೂರು ಸಿನಿಮಾ ಮಾಡಿದರೂ ಗಾಂಧಿನಗರದಲ್ಲಿ ಓಡಾಡಿದ್ದು ಕಡಿಮೆ. ಆದರೆ ಅದರ ವಾತಾವರಣದಲ್ಲಿ ನಡೆಯೋ ವಿದ್ಯಮಾನಗಳು ಅವರಿಗೆ ಸ್ಪಷ್ಟವಾಗಿಯೇ ಗೊತ್ತಿದೆ. ಹೆಸರಿಗೆ ಗಾಂಧಿನಗರ ಅಂತಿದ್ದರೂ ಅಲ್ಯಾರೂ ಗಾಂಧಿಗಳಿಲ್ಲ ಎಂಬಂಥಾ ವಾಸ್ತವವರೂ ಅವರ ಅರಿವಿಗೆ ಬಂದಿದೆ. ಆದ್ದರಿಂದಲೇ ಈ ಸಿನಿಮಾದಲ್ಲಿ ಗಾಂಧಿನಗರದ ಸ್ಟೋರಿಯೂ ಸೇರಿಕೊಂಡಿದೆ. ಅದನ್ನವರು ಲಘು ಧಾಟಿಯಲ್ಲಿ ದಾಟಿಸಿದ್ದಾರಾ ಅಥವಾ ಗಂಭೀರವಾಗಿಯೇ ಅದರತ್ತ ಛಾಟಿ ಬೀಸಿದ್ದಾರಾ ಅನ್ನೋದು ಇದೇ ಹದಿನಾರನೇ ತಾರೀಕಿನಂದು ಜಾಹೀರಾಗಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒನ್ ಲವ್ 2 ಸ್ಟೋರಿ: ಮಜವಾದ ಕಥೆಗೆ ಕನ್ನಡಿಯಾಯ್ತು ಟ್ರೇಲರ್!