Publish Date: Mon, 12 Dec 2016 (11:57 IST)
Updated Date: Mon, 12 Dec 2016 (12:00 IST)
ನವದೆಹಲಿ: ಇದುವರೆಗೆ ಇಂತಹದ್ದೊಂದು ಗೌರವ ಸಾಹಸ ನಿರ್ದೇಶಕರಿಗೆ ಸಿಗುತ್ತಿರಲಿಲ್ಲ. ಇನ್ನು ಮುಂದೆ ಸಾಹಸ ನಿರ್ದೇಶಕರನ್ನೂ ಗೌರವಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೀಗಾಗಿ ಮುಂದಿನ ವರ್ಷದಿಂದ ರಾಷ್ಟ್ರ ಪ್ರಶಸ್ತಿ ಘೋಷಿಸುವಾಗ ಸಾಹಸ ನಿರ್ದೇಶಕರ ಹೆಸರೂ ಕಾಣಿಸಿಕೊಳ್ಳಲಿದೆ. ಅವರನ್ನೂ ಪ್ರಶಸ್ತಿಗೆ ಪರಿಗಣಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೆಲ ಸಮಯದ ಹಿಂದೆ ರಜನೀಕಾಂತ್ ಪುತ್ರಿ ಧನುಷ್ ಪತ್ನಿ ಐಶ್ವರ್ಯಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಸಾಹಸ ನಿರ್ದೇಶಕರನ್ನೂ ಪ್ರಶಸ್ತಿಗೆ ಪರಿಗಣಿಸುವಂತೆ ಕೇಳಿಕೊಂಡಿದ್ದರು. ಅದಕ್ಕೆ ಸ್ಪಂದಿಸಿರುವ ಸರ್ಕಾರ ಇಂತಹದ್ದೊಂದು ತೀರ್ಮಾನ ಕೈಗೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ