Webdunia - Bharat's app for daily news and videos

Install App

ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಗೆ ನೋ ಆಪರೇಷನ್

Krishnaveni K
ಭಾನುವಾರ, 15 ಡಿಸೆಂಬರ್ 2024 (15:46 IST)
ಬೆಂಗಳೂರು: ಬೆನ್ನು ನೋವಿನ ನೆಪದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದ ನಟ ದರ್ಶನ್ ಗೆ ಈಗ ರೆಗ್ಯುಲರ್ ಜಾಮೀನು ಕೂಡಾ ಸಿಕ್ಕಿದೆ. ಅದರ ಬೆನ್ನಲ್ಲೆ ಅವರಿಗೆ ಆಪರೇಷನ್ ಮಾಡಲ್ಲ ಎಂಬ ಸುದ್ದಿ ಬಂದಿದೆ.

ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬ ದೃಷ್ಟಿಯಿಂದಲೇ ಅವರಿಗೆ ಮೊದಲು ಮಧ್ಯಂತರ ಜಾಮೀನು ನೀಡಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳಾದರೂ ಆಪರೇಷನ್ ಆಗಿರಲಿಲ್ಲ. ಇದಕ್ಕೆ ಕಾರಣವನ್ನೂ ನ್ಯಾಯಾಲಯ ಕೇಳಿತ್ತು. ಆಗ ಬಿಪಿ ವೇರಿಯೇಷನ್ ಆಗುತ್ತಿದೆ ಎಂದು ಅವರ ಪರ ವಕೀಲ ಸಿವಿ ನಾಗೇಶ್ ಸಮಜಾಯಿಷಿ ನೀಡಿದ್ದರು.

ಇದೀಗ ದರ್ಶನ್ ಗೆ ಮೊನ್ನೆಯಷ್ಟೇ ರೆಗ್ಯುಲರ್ ಜಾಮೀನು ಸಿಕ್ಕಿದೆ. ಇದೀಗ ಅವರು ಶಸ್ತ್ರಚಿಕಿತ್ಸೆಗೊಳಗಾಗುತ್ತಿಲ್ಲ ಎನ್ನಲಾಗಿದೆ. ಅದರ ಬದಲು ಕನ್ಸರ್ವೇಟಿವ್ ಟ್ರೀಟ್ ಮೆಂಟ್ ಪಡೆಯಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಬಂದಿದೆ.

ಸರ್ಜರಿ ಬದಲು, ಮಾತ್ರೆ, ಫಿಸಿಯೋಥೆರಪಿ ಮೂಲಕವೇ ಚಿಕಿತ್ಸೆ ನೀಡಲಾಗುತ್ತದೆ. ಅದರಂತೆ ಕೆಲವು ಕಾಲ ದರ್ಶನ್ ವಿಶ್ರಾಂತಿ ಪಡೆಯಬೇಕಾಗುತ್ತದೆ. ಆಪರೇಷನ್ ಮಾಡದೆಯೇ ಶಾಖ ಕೊಟ್ಟು ಚಿಕಿತ್ಸೆ ಮುಂದುವರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯಶ್‌ ಸಿನಿಮಾ ದೃಷ್ಟಿಕೋಣ ನನ್ನನ್ನು ಬೆರಗುಗೊಳಿಸಿತು: ಲೇಡಿ ಸೂಪರ್‌ಸ್ಟಾರ್‌ ನಯನತಾರಾ

ನಿಮ್ಮ ಯಶ್ ಯಾವತ್ತೂ ಕನ್ನಡಿಗರು ತಲೆ ತಗ್ಗಿಸುವ ಕೆಲಸ ಮಾಡಲ್ಲ: ಟಾಕ್ಸಿಕ್ ಟ್ರೈಲರ್ ನಲ್ಲಿ ಯಶ್ ಪ್ರಾಮಿಸ್ Video

ಟಾಕ್ಸಿಕ್ ಟ್ರೈಲರ್ ಬಿಡುಗಡೆ: ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ Video

ದೀಪಾವಳಿಗೆ ಡಬಲ್‌ ಧಮಾಕಾ: ಹಬ್ಬದ ಸಂಭ್ರಮದಲ್ಲೇ ತೆರೆಗೆ ಅಪ್ಪಲಿಸಲಿದೆ ರಾಮಾಯಣ ಸಿನಿಮಾ

ಜೈಲಿನಲ್ಲಿರುವ ನಟ ದರ್ಶನ್ ಗೆ ಈಗ ಶುರುವಾಗಿ ಟೆನ್ಷನ್: ಆಪ್ತರೇ ಹೀಗೆ ಮಾಡಿದರಲ್ಲಾ...

ಮುಂದಿನ ಸುದ್ದಿ
Show comments