Select Your Language

Notifications

webdunia
webdunia
webdunia
webdunia

ಅರ್ಧದಲ್ಲಿ ನಿಂತಿದ್ದ ಸಿನಿಮಾಗೆ ಮತ್ತೇ ಜೀವ ತುಂಬಿದ ನೀನಾಸಂ ಸತೀಶ್‌

The Raise Of Ashok, Actor Satish Ninasam New Look, Ashok Blade Cinema New Title,

Sampriya

ಬೆಂಗಳೂರು , ಶುಕ್ರವಾರ, 10 ಜನವರಿ 2025 (19:37 IST)
Photo Courtesy X
ಬೆಂಗಳೂರು: ನೀನಾಸಂ ಸತೀಶ್ ಅಭಿನಯದ ಅಶೋಕ ಬ್ಲೇಡ್ ಸಿನಿಮಾವೀಗ 'ದಿ ರೈಸ್ ಆಫ್ ಅಶೋಕ' ಎಂಬ ಶೀರ್ಷಿಕೆಯೊಂದಿಗೆ ಶೂಟಿಂಗ್‌ ಶುರುಮಾಡಿದೆ. ಕೈಯಲ್ಲಿ ಮಚ್ಚು ಹಿಡಿದು ರಗಡ್‌ ಅವತಾರ ತಾಳಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ ಸತೀಶ್ ಅವರು ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ಬಳಿಕ ಈ ಚಿತ್ರ ನಿಂತು ಹೋಯ್ತು ಎಂಬ ಸುದ್ದಿಯಾಗಿತ್ತು. ಆದರೆ ನಟ ನೀನಾಸಂ ಸತೀಶ್ ‘ದಿ ರೈಸ್ ಆಫ್ ಅಶೋಕ’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ವಿನೋದ್ ದೊಂಡಾಲೆ ಶೇಕಡ 80%ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಒಂದಿಷ್ಟು ಟಾಕಿ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತು.

ಇದೀಗ ಉಳಿಸ ದೃಶ್ಯಗಳಿಗೆ  ಮನು ಶೇಡ್ಗಾರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮಚ್ಚು ಹಿಡಿದು ರಗಡ್ ಲುಕ್‌ನಲ್ಲಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ.

ಇದು ರೆಟ್ರೋ ಕಾಲದ ಕಥೆ ಅನ್ನೋದು ಪೋಸ್ಟರ್‌ನಲ್ಲಿ ಗೊತ್ತಾಗ್ತಿದೆ. ಬಂಡಾಯದ ಕಥೆಯನ್ನು ಹರವಿಡೋದಿಕ್ಕೆ ಸತೀಶ್ ಟೀಮ್ ಸಜ್ಜಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಸಂಕ್ರಾಂತಿ ಆಚರಿಸಲು ದರ್ಶನ್ ಪ್ಲಾನ್‌, ಕೋರ್ಟ್ ಬಳಿ ಡಿಬಾಸ್ ಬೇಡಿಕೆ ಹೀಗಿತ್ತು