Webdunia - Bharat's app for daily news and videos

Install App

ನಿಜ್ವಾಗ್ಲೂ ನಿಧಿಗೆ ತೊಂದರೆ ಕೊಟ್ಟಿದ್ದರಾ ರಾಕಿಂಗ್ ಸ್ಟಾರ್ ಯಶ್?!

Webdunia
ಬುಧವಾರ, 3 ಮಾರ್ಚ್ 2021 (10:50 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ನಟಿ ನಿಧಿ ಸುಬ್ಬಯ್ಯ ನಿನ್ನೆ ರಿವೀಲ್ ಮಾಡಿದ ವಿಚಾರವೊಂದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

 

ದೊಡ್ಮನೆಯೊಳಗೆ ರಾತ್ರಿ ಟಾಸ್ಕ್ ಎಲ್ಲಾ ಮುಗಿದ ಮೇಲೆ ನಿಧಿ ತಮ್ಮ ಸಂಗಡಿಗರೊಂದಿಗೆ ವಿಷಯವೊಂದನ್ನು ಹಂಚಿಕೊಳ್ಳುತ್ತಾರೆ. ಮೈಸೂರಿನಲ್ಲಿರುವ ತಮ್ಮ ತಾತನ ಮನೆಯಲ್ಲಿದ್ದರಂತೆ. ಆಗ ನಡೆದ ಘಟನೆಯೊಂದನ್ನು ಅವರು ಹಂಚಿಕೊಂಡಿದ್ದಾರೆ.

ತಾತನ ರೂಂ ಕೆಳಗೆ ಗ್ರೌಂಡ್ ಫ್ಲೋರ್ ನಲ್ಲಿತ್ತು. ನಾನು ಮೇಲಿನ ರೂಂನಲ್ಲಿದ್ದೆ. ಒಂದು ದಿನ ಯಾರೋ ತಾತನ ರೂಂನ ಕಿಟಿಕಿ ಬಳಿ ಪಟಾಕಿ ಎಸೆದು ಹೋದರು. ನಿಧಿ ಹಾಗೂ ತಾತ ಗಾಬರಿಯಿಂದ ಹೊರಬಂದು ನೋಡಿದರೆ ಕರ್ಟನ್ ಸುಟ್ಟು ಹೋಗಿತ್ತು. ಹೊರಗಡೆ ನಾಲ್ಕು ಬೈಕ್ ಹೋಗಿದ್ದು ಗೊತ್ತಾಯ್ತು. ಆದರೆ ಯಾರು ಹೀಗೆ ಮಾಡಿದ್ದು ಎಂದು ಗೊತ್ತಾಗಲಿಲ್ಲ. ಪೊಲೀಸರನ್ನು ಕರೆಸಿ ವಿಷಯ ತಿಳಿಸಿದರಂತೆ.

ಅದಾದ ಬಳಿಕ ಒಮ್ಮೆ ಮೈಸೂರಿನಲ್ಲಿ ಪೊಲೀಸರಿಗಾಗಿ ವಿಶೇಷ ಶೋನಲ್ಲಿ ಪರ್ಫಾರ್ಮೆನ್ಸ್ ಕೊಡಬೇಕಿತ್ತು. ಅದರ ರಿಹರ್ಸಲ್ ನಡೆಯುತ್ತಿತ್ತು. ಆಗ ಒಬ್ಬ ನಟ ನನ್ನ ಬಳಿ ಬಂದು ನಿಮ್ಮಲ್ಲಿ ಕ್ಷಮೆ ಕೇಳಬೇಕು,ನಿಮಗೆ ಪಟಾಕಿ ಎಸೆದಿದ್ದ ನೆನಪಿದೆಯೇ ಎಂದು ಕೇಳಿದರು. ಹೌದು ನಮ್ಮ ಮನೆಯ ಕರ್ಟನ್ ಎಲ್ಲಾ ಸುಟ್ಟು ಹೋಗಿತ್ತು ಎಂದೆ. ಆಗ ಅವರು ಅದು ಮಾಡಿದ್ದು ನಾನೇ ಎಂದರಂತೆ.

ಆ ನಟ ಬೇರೆ ಯಾರೂ ಅಲ್ಲ ರಾಕಿಂಗ್ ಸ್ಟಾರ್ ಯಶ್. ಇಂದು ಅವರು ಸ್ಟಾರ್ ನಟ. ಆದರೆ ಆ ಘಟನೆ ನಡೆಯುವಾಗ ಅವರು ಸಿನಿಮಾಗೆ ಬಂದಿರಲಿಲ್ಲ ಎಂದು ನಿಧಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments