ಅತ್ತಿಗೆ ಸೀಮಂತದಲ್ಲೂ ನಟಿ ವೈಷ್ಣವಿ ಗೌಡಗೆ ಮತ್ತೇ ಅದೇ ಪ್ರಶ್ನೆ ಕೇಳಿದ ನೆಟ್ಟಿಗರು

Sampriya
ಮಂಗಳವಾರ, 20 ಆಗಸ್ಟ್ 2024 (18:44 IST)
Photo Courtesy X
ಬೆಂಗಳೂರು: ಅಗ್ನಿಸಾಕ್ಷಿ, ಬಿಗ್‌ಬಾಸ್ ಹಾಗೂ ಸೀತಾರಾಮ ಸೀರಿಯಲ್ ಮೂಲಕ ಜನಮನ್ನಣೆ ಗಳಿಸಿರುವ ನಟಿ ವೈಷ್ಣವಿ ಗೌಡ ಅವರ ಮನೆ ಸಂಭ್ರಮದಲ್ಲಿದೆ. ಹೌದು ವೈಷ್ಣವಿ ಅವರ ಅಣ್ಣ ಹಾಗೂ ಅತ್ತಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವೈಷ್ಣವಿ ಅವರು ಸೀಮಂತ ಶಾಸ್ತ್ರದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ವೈಷ್ಣವಿ ಅವರು ಸೀರೆಯಲ್ಲಿ ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಅಣ್ಣ ಅತ್ತಿಗೆಯ ಫೋಟೋ ಹಂಚಿಕೊಂಡಿರುವ ಅವರು ಇನ್ನೂ ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಪೋಟೋ ನೋಡಿದವರು ದಂಪತಿ ಶುಭಕೋರಿದ್ದಾರೆ, ಮತ್ತೇ ಕೆಲವರು ವೈಷ್ಣವಿ ನಿಮ್ಮದು ಯಾವಾಗ ಎಂದು ಕಾಲೆಳೆದಿದ್ದಾರೆ.

ಸದ್ಯ ವೈಷ್ಣವಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಸೀರಿಯಲ್‌ನಲ್ಲಿ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರ ನೈಜ ಅಭಿನಯಕ್ಕೆ ಹಾಗೂ ಸಿಂಪಲ್‌ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದು, ಈ ಸೀರಿಯಲ್ ಟಾಫ್‌ ರೇಟಿಂಗ್‌ನಲ್ಲಿ ಮುನ್ನುಗ್ಗುತ್ತಿದೆ.

ಅದಲ್ಲದೆ ಬೆಳ್ಳಿತೆರೆ ಮಿಂಚಲೂ ರೆಡಿಯಾಗಿರುವ ವೈಷ್ಣವಿ ಅವರು ಡೈರೆಕ್ಟರ್ ಮಹೇಶ್ ಗೌಡ ನಟನೆಯ 'ಬಿಳಿ ಚುಕ್ಕಿ ಹಳ್ಳಿ ಹಕ್ಕಿ' ಚಿತ್ರದಲ್ಲಿ ವೈಷ್ಣವಿ ಗೌಡ ನಾಯಕಿಯಾಗಿದ್ದಾರೆ.

<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments