Publish Date: Tue, 27 Jul 2021 (09:06 IST)
Updated Date: Tue, 27 Jul 2021 (09:07 IST)
ಬೆಂಗಳೂರು: ಹಿರಿಯ ನಟಿ ಜಯಂತಿ ಅವರ ಸಾವಿಗೆ ನಿನ್ನೆ ಅನೇಕ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ನಟಿ, ಜಯಂತಿ ಅವರ ಮಾಜಿ ಸೊಸೆ ಅನು ಪ್ರಭಾಕರ್ ಸಂತಾಪ ವ್ಯಕ್ತಪಡಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನು ಪ್ರಭಾಕರ್ ಈ ಮೊದಲು ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಅವರನ್ನು ಮದುವೆಯಾಗಿದ್ದರು. ಆದರೆ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು.
ಹಾಗಿದ್ದರೂ ಅನು ಪ್ರಭಾಕರ್ ಈಗ ಜಯಂತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಲ್ಲದೆ, ನಿಮ್ಮ ಜೊತೆ ಕಳೆದ ಪ್ರತೀ ಕ್ಷಣ ಸ್ಮರಣೀಯವಾಗಿರುತ್ತೆ ಮಾಮ್. ನಿಮ್ಮಿಂದ ನಾನು ಅನೇಕ ವಿಚಾರಗಳನ್ನು ಕಲಿತೆ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಚಾರದ ಬಗ್ಗೆ ಎಷ್ಟೋ ಬಾರಿ ನನ್ನ ಹತ್ರ ಮಾತಾಡಿದ್ರಿ. ಅಮ್ಮಮ್ಮನ ಜೊತೆ ನೆಮ್ಮದಿಯಾಗಿರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಯಂತಿ ಜೊತೆಗಿನ ಆತ್ಮೀಯ ಕ್ಷಣದ ಫೋಟೋ ಪ್ರಕಟಿಸಿದ್ದರು. ಈ ಪೋಸ್ಟ್ ನೋಡಿ ಕಾಮೆಂಟ್ ಮಾಡಿರುವ ನೆಟ್ಟಿಗರು, ನಿಮ್ಮ ಹೃದಯ ವೈಶಾಲ್ಯತೆಗೆ ನಮಸ್ಕಾರ. ಹಳೆಯದನ್ನು ಯಾವುದನ್ನೂ ಮನಸ್ಸಲ್ಲಿಟ್ಟುಕೊಳ್ಳದೇ ಸಂತಾಪ ಸೂಚಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.