Publish Date: Tue, 27 Jul 2021 (08:55 IST)
Updated Date: Tue, 27 Jul 2021 (08:56 IST)
ಬೆಂಗಳೂರು: ಹಿರಿಯ ನಟಿ ಜಯಂತಿ ತಮ್ಮ ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಜಯಂತಿ ನಿನ್ನೆ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದರು. ಇದೀಗ ಅವರ ಕಣ್ಣುಗಳನ್ನು ಅವರ ಕುಟುಂಬಸ್ಥರು ದಾನ ಮಾಡುವ ಮೂಲಕ ಹಿರಿಯ ನಟಿಯನ್ನು ಅಮರವಾಗಿಸಿದ್ದಾರೆ.
ವರನಟ ಡಾ.ರಾಜ್ ಕುಮಾರ್ ಅವರನ್ನು ಆದರ್ಶವಾಗಿಟ್ಟುಕೊಂಡಿದ್ದ ಜಯಂತಿ ಕೊನೆಗೆ ಅವರಂತೆಯೇ ನೇತ್ರದಾನ ಮಾಡಿ ತಮ್ಮ ಸಾವಿನಲ್ಲೂ ಆದರ್ಶವಾಗಿದ್ದಾರೆ. ಚಿತಾಗಾರದ ಆವರಣದಲ್ಲೇ ನೇತ್ರದಾನ ಪ್ರಕ್ರಿಯೆ ಪೂರ್ಣಮಾಡಲಾಗಿದೆ.