Webdunia - Bharat's app for daily news and videos

Install App

ಮಕ್ಕಳಿಗೆ ಕನ್ನಡದಲ್ಲಿ ಅಕ್ಷರಭ್ಯಾಸ ಮಾಡಿದರೆ ಸಾಲದು, ಕನ್ನಡ ಶಾಲೆಗೆ ಸೇರಿಸಿ: ರಿಷಬ್ ಶೆಟ್ಟಿಗೆ ಸಲಹೆ

Krishnaveni K
ಗುರುವಾರ, 23 ಮೇ 2024 (14:19 IST)
Photo Courtesy: Instagram
ಬೆಂಗಳೂರು: ನಿನ್ನೆಯಷ್ಟೇ ನಟ ರಿಷಬ್ ಶೆಟ್ಟಿ ಕುಟುಂಬ  ಶಾರದಾಂಬೆಯ ಸನ್ನಿಧಿಗೆ ತೆರಳಿ ಇಬ್ಬರೂ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ್ದಾರೆ. ಈ ಫೋಟೋಗಳನ್ನು ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ಸಾಂಪ್ರದಾಯಿಕ ಪಂಚೆ, ಶಾಲು ಹಾಕಿಕೊಂಡು ಪೂಜೆಗೆ ಕುಳಿತಿದ್ದ ರಿಷಬ್ ಮಕ್ಕಳನ್ನು ತೊಡೆ ಮೇಲೆ ಕೂರಿಸಿಕೊಂಡು ಸ್ಲೇಟ್ ಬಳಪದಿಂದ ಪೂಜಾರಿಗಳ ಸಲಹೆಯಂತೆ ಅಕ್ಷರ ಬರೆಸಿದ್ದಾರೆ. ಕನ್ನಡದಲ್ಲಿ ಮಕ್ಕಳಿಗೆ ಅ,ಆ,ಇ,ಈ ಬರೆಸಿರುವ ಫೋಟೋಗಳನ್ನು ರಿಷಬ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಕನ್ನಡ ಪ್ರೀತಿ ಎಲ್ಲರಿಗೂ ಗೊತ್ತಿರುವಂತದ್ದೇ. ಕಾಂತಾರ ಸಿನಿಮಾ ಬಳಿಕ ಬೇರೆ ಭಾಷೆಗಳಿಂದ ಆಫರ್ ಗಳಿದ್ದರೂ ಹೋಗದೇ ಕನ್ನಡಕ್ಕೆ ಮಾತ್ರ ತಮ್ಮ ಕೆಲಸ ಎಂದು ಇಲ್ಲಿಯೇ ಕೂತವರು.

ಇದೀಗ ಮಕ್ಕಳಿಗೆ ಕನ್ನಡದಲ್ಲಿ ಅಕ್ಷರಭ್ಯಾಸ ಮಾಡಿಸಿರುವ ಫೋಟೋ ನೋಡಿದ ನೆಟ್ಟಿಗರು ಕೇವಲ ಅಕ್ಷರಭ್ಯಾಸ ಮಾಡಿಸಿದರೆ ಸಾಲದು, ಅವರನ್ನು ಕನ್ನಡ ಶಾಲೆಗೆ ಕಳುಹಿಸಿ ನೀವೇ ಮೊದಲು ಎಲ್ಲರಿಗೂ ಮಾದರಿಯಾಗಿ ಶೆಟ್ರೇ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ರಿಷಬ್ ಶೆಟ್ಟಿ ಮಗಳು ರಾಧ್ಯಾಳಿಗೆ ಅಕ್ಷರಭ್ಯಾಸ ಮಾಡಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments