Webdunia - Bharat's app for daily news and videos

Install App

ನಿವೇದಿತಾ, ಚಂದನ್ ಶೆಟ್ಟಿ ದಾಂಪತ್ಯ ಬಿರುಕಿನ ನಡುವೆ ಸೃಜನ್ ಲೋಕೇಶ್ ಹೆಸರು

Krishnaveni K
ಶನಿವಾರ, 8 ಜೂನ್ 2024 (12:34 IST)
Photo Credit: Instagram
ಬೆಂಗಳೂರು: ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿವೇದಿತಾ ಗೌಡ, ಚಂದನ್ ಶೆಟ್ಟಿ ನಾಲ್ಕು ವರ್ಷದ ದಾಂಪತ್ಯ ಜೀವನ ಮುರಿದು ಬೀಳಲು ಏನು ಕಾರಣವೋ ಗೊತ್ತಿಲ್ಲ. ಆದರೆ ನೆಟ್ಟಿಗರು ಮಾತ್ರ ಇವರಿಬ್ಬರ ವಿಚ್ಛೇದನದ ನಡುವೆ ಸೃಜನ್ ಲೋಕೇಸ್ ಹೆಸರು ಎಳೆದು ತಂದಿದ್ದಾರೆ.

ನಿವೇದಿತಾ ಮತ್ತು ಚಂದನ್ ಶೆಟ್ಟಿ ನಿನ್ನೆಯಷ್ಟೇ ವಿಚ್ಛೇದನ ಪಡೆದುಕೊಂಡಿದ್ದು, ಎಲ್ಲರಿಗೂ ಶಾಕ್ ನೀಡಿದ್ದರು. ಬಿಗ್ ಬಾಸ್ ನಲ್ಲಿ ಪರಿಚಯವಾದ ಈ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ನಿನ್ನೆ ದಿಡೀರ್ ಫ್ಯಾಮಿಲಿ ಕೋರ್ಟ್ ಗೆ ಬಂದ ಜೋಡಿ ವಿಚ್ಛೇದನ ಪಡೆದುಕೊಂಡಿದೆ. ವಿಶೇಷವೆಂದರೆ ವಿಚ್ಛೇದನದ ಬಳಿಕವೂ ಇಬ್ಬರೂ ಕೈ ಕೈ ಹಿಡಿದುಕೊಂಡೇ ಕೋರ್ಟ್ ನಿಂದ ಹೊರಹೋಗಿದ್ದಾರೆ.

ನಿವೇದಿತಾಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ. ವೃತ್ತಿ ಜೀವನದಲ್ಲಿ ಮುಂದುವರಿಯಬೇಕಿತ್ತು. ಈ ಎಲ್ಲಾ ಮನಸ್ತಾಪಗಳಿಂದ ದಂಪತಿ ದೂರವಾಗಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ನೆಟ್ಟಿಗರು ಸೃಜನ್ ಲೋಕೇಶ್ ಹೆಸರು ಎಳೆದು ತಂದಿದ್ದಾರೆ.

ಈ ಮೊದಲು ನಿವೇದಿತಾ, ಚಂದನ್ ಜೋಡಿ ಸೃಜನ್ ನಡೆಸಿಕೊಡುತ್ತಿದ್ದ ರಾಜ ರಾಣಿ ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ಇಬ್ಬರೂ ಆತ್ಮೀಯರಾಗಿದ್ದರು. ಇತ್ತೀಚೆಗೆ ನಿವೇದಿತಾ ಹುಟ್ಟುಹಬ್ಬಕ್ಕೆ ಸೃಜನ್ ವಿಶೇಷ ವಿಡಿಯೋ ಮೂಲಕ ವಿಶ್ ಮಾಡಿದ್ದರು. ಹೀಗಾಗಿ ನೆಟ್ಟಿಗರು ಚಂದನ್-ನಿವೇದಿತಾ ವಿಚ್ಛೇದನಕ್ಕೆ ಸೃಜನ್ ಕಾರಣ ಎಂದು ಆಪಾದಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಅಮ್ಮನ ಹುಟ್ಟುಹಬ್ಬಕ್ಕೆ ಹೊಸ ಯೋಜನೆ ಕೈಗೊಂಡ ನಟ ಕಿಚ್ಚ ಸುದೀಪ್

ಗಂಡನ ಕೈಚಳಕದಲ್ಲೇ ಸೆರೆಯಾಗಲಿದೆ ಬಿಗ್‌ಬಾಸ್ ಖ್ಯಾತಿಯ ಗೌತಮಿ ಜಾಧವ್ ಮುಂದಿನ ಸಿನಿಮಾ‌‌

ಕಿಚ್ಚ ಸುದೀಪ್ ಬರ್ತ್ ಡೇ ಹಿಂದಿನ ದಿನ ಇಲ್ಲಿ ಅಭಿಮಾನಿಗಳಿಗೆ ಸಿಗ್ತಾರೆ

ಮುಂದಿನ ಸುದ್ದಿ
Show comments