ಪ್ರಿಯಾಮಣಿ ಮದುವೆ ವಾರ್ಷಿಕೋತ್ಸವಕ್ಕೆ ನನ್ನಪ್ರಕಾರ ಗಿಫ್ಟ್!

ಸೋಮವಾರ, 19 ಆಗಸ್ಟ್ 2019 (19:34 IST)
ಕನ್ನಡದ ಪ್ರತಿಭಾವಂತ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ದಾಖಲಾಗುವಂಥಾ ಹೆಸರು ಪ್ರಿಯಾಮಣಿಯವರದ್ದು. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ಬ್ಯುಸಿಯಾಗಿರುವಾಗಲೇ ಮದುವೆಯಾಗಿದ್ದ ಅವರು ಒಂದಷ್ಟು ಕಾಲ ಚಿತ್ರರಂಗದಿಂದ ದೂರವಾಗಿದ್ದರು.

ಇನ್ನೇನು ಅವರು ಸಾಂಸಾರಿಕ ಜೀವನದಲ್ಲಿ ಕಳೆದು ಹೋಗಿಬಿಟ್ಟರಾ ಎಂಬಂಥಾ ಆತಂಕ ಪ್ರೇಕ್ಷಕರನ್ನು ಕಾಡುತ್ತಿದ್ದ ಹೊತ್ತಲ್ಲಿಯೇ ಅವರು ಒಪ್ಪಿಕೊಂಡಿದ್ದ ಚಿತ್ರ ನನ್ನಪ್ರಕಾರ. ಇದು ಕನ್ನಡದ ಎಲ್ಲಾ ಪ್ರೇಕ್ಷಕರಿಗೂ ಭರ್ಜರಿ ಸರ್ಪ್ರೈಸ್ ಕೊಡೋ ಉತ್ಸಾಹದೊಂದಿಗೆ ಈ ವಾರ ಬಿಡುಗಡೆಯಾಗುತ್ತಿದೆ.
ವಿನಯ್ ಬಾಲಾಜಿ ನಿರ್ದೇಶನದ ಈ ಚಿತ್ರ ಪ್ರಿಯಾಮಣಿ ಪಾಲಿಗೂ ಚೆಂದದ ಗಿಫ್ಟ್ ಇದ್ದಂತೆ. ಯಾಕೆಂದರೆ ಅವರು ತುಂಬಾನೇ ಇಷ್ಟಪಟ್ಟು ಒಪ್ಪಿಕೊಂಡಿದ್ದ ಈ ಚಿತ್ರ ಅವರ ವಿವಾಹ ವಾರ್ಶಿಕೋತ್ಸವದಂದೇ ಬಿಡುಗಡೆಯಾಗುತ್ತಿದೆ. ಈ ತಿಂಗಳ ಇಪ್ಪತ್ಮೂರನೇ ತಾರೀಕು ಪ್ರಿಯಾಮಣಿಯ ಮದುವೆ ವಾರ್ಶಿಕೋತ್ಸವ. ಕಾಕತಾಳೀಯವೆಂಬಂತೆ ನನ್ನಪ್ರಕಾರ ಚಿತ್ರ ಕೂಡಾ ಆ ದಿನವೇ ಬಿಡುಗಡೆಯಾಗುತ್ತಿದೆ. ಇದು ಪ್ರಿಯಾಮಣಿ ಪಾಲಿಗೆ ನಿಜಕ್ಕೂ ಮಹತ್ವದ ಚಿತ್ರ. ಯಾಕೆಂದರೆ ವರ್ಷದ ನಂತರ ಅವರು ಈ ಮೂಲಕವೇ ಮತ್ತೆ ಆಗಮಿಸುತ್ತಿದ್ದಾರೆ. ಇಂಥಾ ಸಿನಿಮಾ ತಮ್ಮ ವಿವಾಹ ವಾರ್ಶಿಕೋತ್ಸವದಂದೇ ಬಿಡುಗಡೆಯಾಗುತ್ತಿರೋದರ ಬಗ್ಗೆ ಅವರೂ ಕೂಡಾ ಖುಷಿ ಹೊಂದಿದ್ದಾರೆ.
ಚಿತ್ರತಂಡದ ಪಾಲಿಗೂ ಇದು ಸಡಗರದ ಸಂಗತಿಯೇ. ಯಾಕೆಂದರೆ ಈ ಸಿನಿಮಾದ ಶಕ್ತಿಯಂಥಾ ಪಾತ್ರಕ್ಕೆ ಮತ್ತಷ್ಟು ಕಸುವು ತುಂಬಿರುವವರು ಪ್ರಿಯಾಮಣಿ. ನನ್ನಪ್ರಕಾರ ಚಿತ್ರದ ಕಥೆಯ ಕೇಂದ್ರಬಿಂದುವಾಗಿರೋ ಪಾತ್ರವೇ ಅರದ್ದು. ವಿನಯ್ ಆರಂಭ ಕಾಲದಲ್ಲಿ ಈ ಪಾತ್ರ ಹೀಗೆಯೇ ಮೂಡಿ ಬರಬೇಕೆಂಬ ಕಲ್ಪನೆ ಹೊಂದಿದ್ದರಲ್ಲಾ? ಅದನ್ನೂ ಮೀರಿಸುವಂತೆ ಪ್ರಿಯಾಮಣಿ ಈ ಪಾತ್ರವನ್ನು ಆವಾಹಿಸಿಕೊಂಡಿದ್ದಾರಂತೆ. ತಾನು ನಟಿಸಿದ ಚಿತ್ರವೇ ತನ್ನ ಖುಷಿಯೊಂದಕ್ಕೆ ಗಿಫ್ಟಿನಂತೆ ಸಿಗೋದು ಯಾರೇ ನಟನಟಿಯರಿಗಾದರೂ ಅಪರೂಪದ ವಿಚಾರ. ಅಂಥಾದ್ದೊಂದು ಸಡಗರ ಪ್ರಿಯಾಮಣಿಯವರ ಪಾಲಿಗೀಗ ದಕ್ಕಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಡುಂಬನಾಗಲು ಅದೆಂಥಾ ಹರಸಾಹಸ ಮಾಡಿದ್ದರು ಗೊತ್ತೇ ಪವನ್?