Webdunia - Bharat's app for daily news and videos

Install App

ನನ್ನಪ್ರಕಾರ: ಸೂಪರ್ ಕಾಪ್ ಆದ್ರು ಹುಲಿ ಕಿಶೋರ್!

Webdunia
ಸೋಮವಾರ, 19 ಆಗಸ್ಟ್ 2019 (19:42 IST)
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತಮಿಳು ಮುಂತಾದ ಭಾಷೆಗಳಲ್ಲಿಯೂ ವಿಶಿಷ್ಟ ನಟನಾಗಿ ಗುರುತಿಸಿಕೊಂಡಿರುವವರು ಕಿಶೋರ್. ಕನ್ನಡದಲ್ಲಿ ಈವರೆಗೂ ಹತ್ತು ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸಿರೋ ಕಿಶೋರ್ ರಜನೀಕಾಂತ್ ಅಭಿನಯದ ಕಬಾಲಿ ಚಿತ್ರದಲ್ಲಿ ಮುಖ್ಯ ವಿಲನ್ ಆಗಿಯೂ ಅಬ್ಬರಿಸಿದ್ದವರು.

ಈ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೂ ಛಾಪು ಮೂಡಿಸಿರೋ ಕಿಶೋರ್ ವಿನಯ್ ನಿರ್ದೇಶನದ ನನ್ನಪ್ರಕಾರ ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಕಂಗೊಳಿಸಿದ್ದಾರೆ.
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನಪ್ರಕಾರ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದರಲ್ಲಾ? ಅದರಲ್ಲಿ ಪ್ರಧಾನವಾಗಿ ಗಮನ ಸೆಳೆದಿದ್ದೇ ಕಿಶೋರ್ ಅವರ ಸೂಪರ್ ಕಾಪ್ ಗೆಟಪ್. ಒಂದು ಕ್ರೈಂನ ಬೆಂಬಿದ್ದು, ಇಡೀ ಕಥೆಯನ್ನು ರೋಚಕವಾಗಿ ಸಸ್ಪೆನ್ಸ್ ಥ್ರಿಲ್ಲರ್ ಹಾದಿಯಲ್ಲಿ ಕೊಂಡೊಯ್ಯುವ ಪಾತ್ರವಾಗಿ ಅವರಿಲ್ಲಿ ನಟಿಸಿದ್ದಾರೆ. ಇದಕ್ಕೆ ಅಷ್ಟೇ ಮಹತ್ವಪೂರ್ಣವಾಗಿ ಸಾಥ್ ನೀಡಿದ್ದಾರೆ. ಎಂಥಾ ಪಾತ್ರವನ್ನೇ ಆದರೂ ತಣ್ಣಗಿನ ಅಬ್ಬರದ ಮೂಲಕ ಕಳೆಗಟ್ಟಿಸೋ ತಾಕತ್ತು ಹೊಂದಿರುವ ಕಿಶೋರ್ ಪಾತ್ರ ನನ್ನಪ್ರಕಾರ ಚಿತ್ರದ ಹೈಲೈಟ್ ಅನ್ನೋದು ಚಿತ್ರತಂಡದ ಅಭಿಪ್ರಾಯ.
ವಿನಯ್ ಈ ಚಿತ್ರದ ಕಥೆ ಬರೆದು ಚಿತ್ರೀಕರಣಕ್ಕೆ ಅಣಿಗೊಳ್ಳುವ ಹೊತ್ತಿಗೆಲ್ಲ ಈ ಪಾತ್ರಕ್ಕೆ ಕಿಶೋರ್ ಅವರನ್ನೇ ಫಿಕ್ಸ್ ಮಾಡಿಕೊಂಡಿದ್ದರಂತೆ. ಕಿಶೋರ್ ಹೇಳಿಕೇಳಿ ಭಿನ್ನ ಪ್ರಯೋಗಗಳಿಗಾಗಿ ಸದಾ ತುಡಿಯುವಂಥಾ ಮನಸ್ಥಿತಿ ಹೊಂದಿರುವವರು. ಅವರಂತೂ ವಿನಯ್ ಬಾಲಾಜಿ ಈ ಕಥೆ ಹೇಳಿದಾಗ ಖುಷಿಗೊಂಡು ಮರು ಮಾತಿಲ್ಲದೆ ಒಪ್ಪಿಗೆ ಸೂಚಿಸಿದ್ದರಂತೆ. ಖುದ್ದು ಕಿಶೋರ್ ಈ ಪಾತ್ರದ ಬಗ್ಗೆ ಮೋಹಗೊಂಡಿದ್ದಾರೆ. ಜೊತೆಗೆ ಒಟ್ಟಾರೆಯಾಗಿ ನನ್ನ ಪ್ರಕಾರ ಚಿತ್ರ ಮೂಡಿ ಬಂದಿರೋದರ ಬಗ್ಗೆಯೂ ಅವರಲ್ಲಿ ಹೆಮ್ಮೆಯ ಭಾವವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments