Publish Date: Tue, 12 Oct 2021 (16:50 IST)
Updated Date: Tue, 12 Oct 2021 (16:53 IST)
ಹೈದರಾಬಾದ್: ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ನಟ ನಾಗಚೈತನ್ಯ ಈಗ ಹೊಸ ಮನೆ ಖರೀದಿಸಿದ್ದು, ಅಲ್ಲಿಗೆ ಶಿಫ್ಟ್ ಆಗಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ನಾಗ ತಮ್ಮ ಹೆತ್ತವರೊಂದಿಗಿದ್ದಾರೆ. ಇದೀಗ ಜುಬ್ಲಿ ಹಿಲ್ಸ್ ಏರಿಯಾದಲ್ಲಿ ಅಪಾರ್ಟ್ ಮೆಂಟ್ ಒಂದನ್ನು ಖರೀದಿ ಮಾಡಿದ್ದು, ಸದ್ಯದಲ್ಲೇ ಅಲ್ಲಿಗೆ ಶಿಫ್ಟ್ ಆಗಲಿದ್ದಾರಂತೆ. ಇದರ ವಿನ್ಯಾಸ ಕೆಲಸಗಳು ಸದ್ಯಕ್ಕೆ ನಡೆಯುತ್ತಿದೆಯಷ್ಟೇ ಎಂದು ತಿಳಿದುಬಂದಿದೆ.
ಅಕ್ಟೋಬರ್ 2 ರಂದು ಸಮಂತಾ-ನಾಗ ಬೇರೆಯಾಗುತ್ತಿರುವ ಸುದ್ದಿ ಪ್ರಕಟಿಸಿದ್ದರು. ಸಮಂತಾ ತಮ್ಮ ಮೊದಲಿನ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ನಾಗ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ.