Select Your Language

Notifications

webdunia
webdunia
webdunia
webdunia

ಮಲ್ಟಿಪ್ಲೆಕ್ಸ್`ಗಳ ದುಬಾರಿ ಟಿಕೆಟ್ ದರಕ್ಕೆ ಬ್ರೇಕ್: ಬಜೆಟ್ ನಿರ್ಣಯ ಕೊನೆಗೂ ಜಾರಿ

ಮಲ್ಟಿಪ್ಲೆಕ್ಸ್`ಗಳ ದುಬಾರಿ ಟಿಕೆಟ್ ದರಕ್ಕೆ ಬ್ರೇಕ್: ಬಜೆಟ್ ನಿರ್ಣಯ ಕೊನೆಗೂ ಜಾರಿ
ಬೆಂಗಳೂರು , ಬುಧವಾರ, 26 ಏಪ್ರಿಲ್ 2017 (18:37 IST)
ಮಲ್ಟಿಪ್ಲೆಕ್ಸ್`ಗಳಲ್ಲಿ ಸಿನಿಮಾ ಟಿಕೆಟ್`ಗೆ ದುಬಾರಿ ಹಣ ವಸೂಲಿಗೆ ಬ್ರೇಕ್ ಹಾಕಲು ಕೊನೆಗೂ ರಾಜ್ಯ ಸರ್ಕಾರ ಮುಂದಾಗಿದೆ. ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ ಎಂಬ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಸಹಿಹಾಕಿದ್ದು, ನಾಳೆಯಿಂದಲೇ ಜಾರಿಗೆ ಬರುವ ಸಾಧ್ಯತೆ ಇದೆ.

ಬಜೆಟ್`ನಲ್ಲೇ ಟಿಕೆಟ್ ದರ 200 ರೂ. ನಿಗದಿ ಮಾಡಿರುನ ನಿರ್ಣಯ ಘೋಷಿಸಲಾಗಿತ್ತು. ಆದರೆ, ಇದುವರೆಗೂ ಆದೇಶ ಜಾರಿಗೆ ಬಂದಿರಲಿಲ್ಲ. ಹೀಗಾಗಿ, ಭಾರೀ ಟೀಕೆಯೂ ಕೇಳಿಬಂದಿತ್ತು. ಇದೀಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈಗಾಗಲೇ ಕೆಲ ಸಿಂಗಲ್ ಸ್ಕ್ರೀನ್`ಗಳಲ್ಲಿ ಟಿಕೆಟ್ ದರ ಕಡಿತಗೊಳಿಸಲಾಗಿದೆ.

ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನ ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಯಮಿತಗೊಳಿಸಲಾಗಿತ್ತು. ಈಗ ಕನ್ನಡದಲ್ಲೂ ಈ ಆದೇಶ ಬಂದಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಸರ್ಕಾರದ ನಿರ್ಧಾರವನ್ನ ಸ್ವಾಗತಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಭಾರತ ಮಾಡಲು ಹೊರಟಿದ್ದಾರಾ ಬಾಹುಬಲಿ ಪ್ರಭಾಸ್!