ಅಣ್ಣಾವ್ರ ಹಾಡು ಹೇಳುತ್ತಾ ಮೈಮರೆತ ಮಲಯಾಳಂ ನಟ ಮೋಹನ್ ಲಾಲ್

Krishnaveni K
ಸೋಮವಾರ, 20 ಮೇ 2024 (15:03 IST)
ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರ ಹಳೆಯ ಹಾಡೊಂದನ್ನು ನೋಡುತ್ತಾ ತಾನೂ ಹಾಡುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕನ್ನಡದಲ್ಲೂ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಿತ್ಯ ನಾಯಕರಾಗಿದ್ದ ಲವ್, ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದ ಮೈತ್ರಿ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಹೀಗಾಗಿ ಅವರಿಗೂ ಕನ್ನಡ ನಂಟಿದೆ.

ಕೇವಲ ನಟನಾಗಿ ಮಾತ್ರವಲ್ಲ, ಮೋಹನ್ ಲಾಲ್ ಮಲಯಾಳಂನಲ್ಲಿ ಗಾಯಕರಾಗಿಯೂ ಚಿಪರಿಚಿತರಾಗಿದ್ದಾರೆ. ಇದೀಗ ಮೋಹನ್ ಲಾಲ್ ಬಿಡುವಿನ ವೇಳೆಯಲ್ಲಿ ತಮ್ಮ ಐಪ್ಯಾಡ್ ನಲ್ಲಿ ಅಣ್ಣಾವ್ರ ಹಾಡನ್ನು ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೇವಲ ವಿಡಿಯೋ ವೀಕ್ಷಣೆ ಮಾತ್ರವಲ್ಲ, ಆಕ್ಷನ್ ಸಮೇತ ಹಾಡಿಗೆ ತಾವೂ ಧ್ವನಿಗೂಡಿಸುತ್ತಾರೆ.

ಅಣ್ಣಾವ್ರ ಸೂಪರ್ ಹಿಟ್ ಹಾಡು ‘ಎಂದೆಂದೂ ನಿನ್ನನು ಮರೆತು’ ಹಾಡನ್ನು ಮೋಹನ್ ಲಾಲ್ ವೀಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಾಡಿನ ಜೊತೆಗೆ ಅಣ್ಣಾವ್ರಂತೆ ಅಭಿನಯಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದು ಕನ್ನಡಿಗರ ಮನ ಸೆಳೆದಿದೆ. ಸರಿಯಾಗಿ ಕನ್ನಡ ಪದಗಳನ್ನು ಹೇಳಲು ಬಾರದೇ ಇದ್ದರೂ ಹಾಡಿನ ದಾಟಿಯನ್ನು ಗುನುಗಿದ್ದಾರೆ. ಅವರ ಈ ವಿಡಿಯೋಗೆ ಸಾವಿರಾರು ಲೈಕ್ಸ್ ಬಂದಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್‌ಗೆ ಜೀವಾವಧಿ ಕೊಟ್ರು ಓಕೆ, ದರ್ಶನ್ ಪರ ವಕೀಲರ ವಾದ ಹೀಗಿತ್ತು

ಮಾಜಿ ಗೆಳತಿಯ ಮುಖದಲ್ಲಿ ಸದಾ ನಗುವನ್ನು ಬಯಸಿದ ನಟ ಅರ್ಜುನ್ ಕಪೂರ್

BBK12: ಕಳಪೆ ಕೊಟ್ಟಿದ್ದಕ್ಕೆ ದುರಹಂಕಾರ ತೋರಿಸ್ತಿದ್ದಾರಾ ಅಶ್ವಿನಿ ಗೌಡ

ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಕಾಂತಾರ ವೀಕ್ಷಿಸಿದ ಅಲ್ಲು ಅರ್ಜುನ್, ಸಿನಿಮಾ ಬಗ್ಗೆ ಹೀಗೆ ಬರೆದಿದ್ದಾರೆ

ಮುಂದಿನ ಸುದ್ದಿ
Show comments