Happy Birthday Jr NTR: ಜ್ಯೂ ಎನ್ ಟಿಆರ್ ಗಿದೆ ಕುಂದಾಪುರ ಕನೆಕ್ಷನ್

Krishnaveni K
ಸೋಮವಾರ, 20 ಮೇ 2024 (09:51 IST)
ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ ಎನ್ ಟಿಆರ್ ಅಲಿಯಾಸ್ ತಾರಕ್ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಕನ್ನಡ ನಾಡಿನ ಕನೆಕ್ಷನ್ ಬಗ್ಗೆ ಇಂದು ತಿಳಿದುಕೊಳ್ಳೋಣ.
 

ನಟ ನಂದಮೂರಿ ಹರಿಕೃಷ್ಣನ್ ಮತ್ತು ಶಾಲಿನಿ ಭಾಸ್ಕರ ರಾವ್ ಪುತ್ರನಾಗಿ 1983 ರ ಮೇ 20 ರಂದು ಜ್ಯೂ ಎನ್ ಟಿಆರ್ ಜನಿಸುತ್ತಾರೆ. ಇದೀಗ ಅವರು 41 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ಇಬ್ಬರು ಮುದ್ದಾದ ಮಕ್ಕಳ ಸುಂದರ ಸಂಸಾರ ಜ್ಯೂ ಎನ್ ಟಿಆರ್ ಅವರದ್ದು.

ಅವರಿಗೆ ಕರ್ನಾಟಕದ ಕುಂದಾಪುರದ ಕನೆಕ್ಷನ್ ಚೆನ್ನಾಗಿಯೇ ಇದೆ. ಯಾಕೆಂದರೆ ಕುಂದಾಪುರ ಅವರ ತಾಯಿಯ ಊರು. ಹೀಗಾಗಿ ಜ್ಯೂ ಎನ್ ಟಿಆರ್ ಗೆ ತಕ್ಕಮಟ್ಟಿಗೆ ಕನ್ನಡ ಮಾತನಾಡಲೂ ಗೊತ್ತು. ಕುಂದಾಪುರ ನನ್ನ ತಾಯಿಯ ಊರು ಎಂದು ಅವರ ಅನೇಕ ಬಾರಿ ಹೇಳಿದ್ದು ಇದೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಸಿನಿಮಾಗಾಗಿ ಗೆಳೆಯ ಗೆಳೆಯ ಎನ್ನುವ ಹಾಡನ್ನೂ ಹಾಡಿದ್ದರು.

1991 ರಲ್ಲಿ ಸಿನಿಮಾ ಜರ್ನಿ ಆರಂಭಿಸಿದ ಜ್ಯೂ ಎನ್ ಟಿಆರ್ ಇಂದಿನವರೆಗೆ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ದಿಗ್ಗಜ ನಟ ಎನ್ ಟಿಆರ್ ಮೊಮ್ಮಗ ತಾರಕ್ ಇಂದಿಗೆ ಗ್ಲೋಬಲ್ ‍ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಳಿಕ ಅವರ ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಇದೀಗ ಹಿಂದಿಯಲ್ಲಿ ವಾರ್ 2, ದೇವರ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಏಕಕಾಲಕ್ಕೆ ನಟಿಸುತ್ತಿದ್ದಾರೆ. ಇದಾದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

ಮುಂದಿನ ಸುದ್ದಿ
Show comments