ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಒಪ್ಪಂ ಚಿತ್ರ ಹಿಟ್ ಆಗಿದೆ. ಬೇಬಿ ಮೀನಾಕ್ಷಿ, ವಿಮಲಾ ರಾಮನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದು ಈಗ ತೆಲುಗು ಭಾಷೆಗೆ ಡಬ್ ಆಗುತ್ತಿದೆ.
ದಿಲೀಪ್ ಕುಮಾರ್ ಬೊಲುಗೋಟಿ ಅವರ ಓವರ್ ಸೀಸ್ ನೆಟ್ವರ್ಕ್ ಎಂಟರ್ ಟೇನ್ಮೆಂಟ್ ಲಾಂಛನದಲ್ಲಿ ಕನುಪಾಪ ಎಂದು ತೆಲುಗು ಭಾಷೆಗೆ ಡಬ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು ಮಾತನಾಡುತ್ತಾ ಮೋಹನ್ ಲಾಲ್ ಮತ್ತು ಪ್ರಿಯದರ್ಶನ್ ಬಗ್ಗೆ ವಿವರ ನೀಡಿದ್ದಾರೆ.
ಮೋಹನ್ ಲಾಲ್ ಮತ್ತು ಪ್ರಿಯದರ್ಶನ್ ಕಾಂಬಿನೇಷನ್ನಲ್ಲಿ 42 ಚಿತ್ರಗಳು ಬಂದಿದ್ದು, ಇವುಗಳಲ್ಲಿ 32 ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಫೆಬ್ರವರಿ 3ರಂದು ಈ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. "ಅಂಧನಾಗಿ ಮೋಹನ್ ಲಾಲ್ ಅಭಿನಯ ಅದ್ಭುತ. ತೆಲುಗು ಪ್ರೇಕ್ಷಕರಿಗೂ ಈ ಚಿತ್ರ ಇಷ್ಟವಾಗುತ್ತದೆ" ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.