ನಟ ಅನಿರುದ್ಧ್ ಮನೆಗೆ ಶಾಸಕಿ ಸೌಮ್ಯ ರೆಡ್ಡಿ ದಿಡೀರ್ ಭೇಟಿಗೆ ಕಾರಣವೇನು ಗೊತ್ತಾ?

Webdunia
ಶುಕ್ರವಾರ, 8 ಜನವರಿ 2021 (10:40 IST)
ಬೆಂಗಳೂರು: ನಟ ಅನಿರುದ್ಧ್ ಮನೆಗೆ ನಿನ್ನೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ದಿಡೀರ್ ಭೇಟಿ ನೀಡಿದ್ದು, ಈ ಭೇಟಿಯ ಹಿಂದಿನ ಕಾರಣವನ್ನು ಸ್ವತಃ ಅನಿರುದ್ಧ್ ಹೇಳಿಕೊಂಡಿದ್ದಾರೆ.


ಅನಿರುದ್ಧ್ ಇತ್ತೀಚೆಗೆ ಕಸ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆದು ಸ್ವಚ್ಛತೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಶಾಸಕಿ ಸೌಮ್ಯ ರೆಡ್ಡಿ ಅನಿರುದ್ಧ್ ಮನೆಗೆ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅನಿರುದ್ಧ್ ತಮ್ಮ ಪರಿಕಲ್ಪನೆಗಳ ಕುರಿತು ಶಾಸಕಿ ಜೊತೆ ಚರ್ಚೆ ನಡೆಸಿದ್ದಾರೆ.

ಇತ್ತೀಚೆಗಷ್ಟೇ ಅನಿರುದ್ಧ್ ಗುಜರಾತ್ ಮಾದರಿಯಲ್ಲಿ ಕಾಲುವೆಗಳ ಮೇಲೆ ಸೌರ ಫಲಕವನ್ನು ಹಾಕುವ ಯೋಜನೆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಈ ಯೋಜನೆ ಬಗ್ಗೆ ಹಾಗೂ ನಗರದಲ್ಲಿ ಕಸ ವಿಲೇವಾರಿಗೆ ತಮ್ಮ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಹೇಳಿದಂತೆ ಹಸಿ ಕಸ ನೀಡಿ ಹಣ ಪಡೆಯುವ ‘ಆರ್ಯವರ್ಧನ್ ಯೋಜನೆ’ ಬಗ್ಗೆ ಶಾಸಕಿ ಜತೆ ಚರ್ಚೆ ನಡೆಸಿದ್ದಾರೆ. ಈ ಸಮಾಜಪರ ಕೆಲಸಗಳ ಬಗ್ಗೆ ತಮ್ಮ ಪರಿಕಲ್ಪನೆಗಳಿಗೆ ಶಾಸಕಿ ಸೌಮ್ಯ ರೆಡ್ಡಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಬೆಂಬಲ ನೀಡಿದ್ದಾರೆ ಎಂದು ಅನಿರುದ್ಧ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

ಮುಂದಿನ ಸುದ್ದಿ
Show comments