ಬೆಂಗಳೂರು: ಪತಿ ಚಿರಂಜೀವಿ ಸರ್ಜಾ ಅಗಲುವಿಕೆಯ ನಂತರ ನಟಿ ಮೇಘನಾ ಸರ್ಜಾಗೆ ಈಗ ಮುದ್ದು ಮಗನೇ ಪ್ರಪಂಚ. ಇದೀಗ ತಮ್ಮ ಪುಟಾಣಿ ಮಗನ ಕೈ ಕಾಲುಗಳ ಕಲಾಕೃತಿಯನ್ನು ಮಾಡಿಸಿಕೊಂಡು ಮೇಘನಾ ಎಂದೆಂದಿಗೂ ಅದು ಚಿರಂಜೀವಿಯಾಗಿರುವಂತೆ ನೋಡಿಕೊಂಡಿದ್ದಾರೆ.
ಈ ಹಿಂದೆ ರಾಧಿಕಾ-ಯಶ್ ಜೋಡಿ ಕೂಡಾ ತಮ್ಮ ಪುತ್ರಿ ಐರಾ ಯಶ್ ಕೈ ಮತ್ತು ಕಾಲುಗಳನ್ನು ಇದೇ ರೀತಿಯ ಕಲಾಕೃತಿ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದರು. ಇದೀಗ ಮೇಘನಾ ಕೂಡಾ ಅದೇ ಕೆಲಸ ಮಾಡಿದ್ದಾರೆ. ವಿಶೇಷ ರೀತಿಯ ಕಲಾಕೃತಿಯ ಮೂಲಕ ಮಗನ ಕೈ ಮತ್ತು ಕಾಲುಗಳ ಕಲಾಕೃತಿಯನ್ನು ಮಾಡಿಸಿದ್ದಾರೆ. ಇದು ತಮ್ಮ ಮಗನಿಗೆ ವಿಶೇಷವಾದ ಉಡುಗೊರೆಯಾಗಲಿದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಬರೆದುಕೊಂಡಿದ್ದಾರೆ.