Publish Date: Mon, 15 Aug 2022 (09:49 IST)
Updated Date: Mon, 15 Aug 2022 (09:49 IST)
ಚೆನ್ನೈ: ಬಹುಭಾಷಾ ನಟಿ ಮೀನಾ ಇತ್ತೀಚೆಗಷ್ಟೇ ಪತಿ ವಿಯೋಗ ಅನುಭವಿಸಿದ್ದರು. ಮೀನಾ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ಅಕಾಲಿಕವಾಗಿ ನಿಧನರಾಗಿದ್ದರು. ಅವರ ಸಾವಿನ ನಿಜ ಕಾರಣದ ಬಗ್ಗೆ ಸ್ವತಃ ಮೀನಾ ಈಗ ಮನದಾಳದ ಮಾತನಾಡಿದ್ದಾರೆ.
ಮೀನಾ ಸೋಷಿಯಲ್ ಮೀಡಿಯಾದಲ್ಲಿ ಅಂಗದಾನದ ಮಹತ್ವದ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದು, ಪತಿ ಸಾವಿಗೆ ಸಕಾಲಕ್ಕೆ ಅಂಗದಾನ ಮಾಡುವವರು ಸಿಗದೇ ಇದ್ದಿದ್ದು ಕಾರಣವಾಯ್ತು ಎಂದಿದ್ದಾರೆ.
ಅಂಗದಾನ ಎನ್ನುವುದು ಪುಣ್ಯದ ಕೆಲಸ. ಇದು ಎಷ್ಟು ಉಪಯುಕ್ತ ಎನ್ನುವುದಕ್ಕೆ ನಾನೇ ಸಾಕ್ಷಿ. ನನ್ನ ಪತಿಗೆ ಸಕಾಲದಲ್ಲಿ ಅಂಗದಾನ ಮಾಡುವವರು ಸಿಕ್ಕಿದ್ದರೆ ಅವರು ಬದುಕುಳಿಯುತ್ತಿದ್ದರು. ಒಬ್ಬ ದಾನಿಯಿಂದ 8 ಮಂದಿ ಜೀವವುಳಿಯಬಹುದು. ಹೀಗಾಗಿ ನಾನು ಅಂಗದಾನ ಮಾಡುವ ಪ್ರತಿಜ್ಞೆ ಮಾಡುತ್ತಿದ್ದೇನೆ ಎಂದಿದ್ದಾರೆ ಮೀನಾ.