Select Your Language

Notifications

webdunia
webdunia
webdunia
webdunia

ಮಲಯಾಳಂ ನಟಿ ಪ್ರಕರಣಕ್ಕೆ ನಟ ದಿಲೀಪ್ ಹೆಸರು ಥಳುಕು ಹಾಕಿದ ಮಾಧ್ಯಮಗಳು!

ಮಲಯಾಳಂ ನಟಿ  ಪ್ರಕರಣಕ್ಕೆ ನಟ ದಿಲೀಪ್ ಹೆಸರು ಥಳುಕು ಹಾಕಿದ ಮಾಧ್ಯಮಗಳು!
Kocchi , ಬುಧವಾರ, 22 ಫೆಬ್ರವರಿ 2017 (10:40 IST)
ಕೊಚ್ಚಿ: ಮೊನ್ನೆಯಷ್ಟೇ ಸುದ್ದಿ ಮಾಡಿದ್ದ ಮಲಯಾಳಂ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮಲಯಾಳಂನ ಖ್ಯಾತ ನಟ ದಿಲೀಪ್ ಹೆಸರನ್ನು ಎಳೆದು ತಂದ ಕೆಲವು ಮಾಧ್ಯಮಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.


 
ಇದಕ್ಕೆಲ್ಲಾ ಕಾರಣ ಪೊಲೀಸರು ಆರೋಪಿ ಪಲ್ಸರ್ ಸುನಿ ಆಲಿಯಾಸ್ ಸುನಿಲ್ ಕುಮಾರ್ ಫೋಟೋವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದು. ಈತ ದಿಲೀಪ್ ಅಭಿಮಾನಿಗಳ ಸಂಘದ ಸಭೆಯೊಂದಕ್ಕೆ ಹಾಜರಾಗಿದ್ದ ಎಂಬ ಸುದ್ದಿ ಹರಡಿತ್ತು. ಹೀಗಾಗಿ ದಿಲೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಿಯಾಜ್ ಖಾನ್ ಫೋಟೋ ಪ್ರಕಟಿಸಿ ಕೆಲ ಮಾಧ್ಯಮಗಳು ಎಡವಟ್ಟು ಮಾಡಿಕೊಂಡಿದ್ದವು. ಅದೂ ಸಾಲದೆಂಬಂತೆ ಪ್ರಕರಣದಲ್ಲಿ ದಿಲೀಪ್ ಕೈವಾಡವಿದೆ ಎಂದೂ ಬಿಂಬಿಸಿದ್ದವು.

ಇದೀಗ ದಿಲೀಪ್ ಅಭಿಮಾನಿಗಳ ಸಂಘದ ಕೆಂಗಣ್ಣಿಗೆ ಗುರಿಯಾಗಿದೆ. ದಿಲೀಪ್ ಮತ್ತು ಈ ನಟಿ ಒಂದು ಕಾಲದಲ್ಲಿ ಸೂಪರ್ ಹಿಟ್ ಜೋಡಿಯಾಗಿದ್ದರೂ, ಯಾವುದೋ ಕಾರಣಕ್ಕೆ ಇವರಿಬ್ಬರ ನಡುವೆ ಮನಸ್ತಾಪವಿತ್ತು. ಹೀಗಾಗಿ ದಿಲೀಪ್ ಹೆಸರನ್ನು ಅನವಶ್ಯಕವಾಗಿ ಎಳೆದುತರಲಾಗಿದೆ. ಇದರಿಂದ ಕೆರಳಿರುವ ದಿಲೀಪ್ ಅಭಿಮಾನಿಗಳ ಸಂಘ ತಮ್ಮ ನೆಚ್ಚಿನ ನಟನನ್ನು ಅನವಶ್ಯಕವಾಗಿ ಪ್ರಕರಣದಲ್ಲಿ ಎಳೆದು ತಂದರೆ ತಕ್ಕ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆ ನಗ್ನ ಸನ್ನಿವೇಶದಲ್ಲಿ ನಟಿಸಿರುವುದು ನಾನೇ: ಕಂಗನಾ